ಮಂಗಳೂರು ನಗರ ಬೀದಿಬದಿ ವ್ಯಾಪಾರಸ್ಥರ ಸಂಘದ ಉದ್ಘಾಟನೆ
ಮಂಗಳೂರು, ಜ.17: ಮಂಗಳೂರು ನಗರ ಬೀದಿಬದಿ ವ್ಯಾಪಾರಸ್ಥರ ಸಂಘದವನ್ನು ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜಾರವರು ನೇತ್ರಾವತಿ ಸಭಾಂಗಣದಲ್ಲಿ ಇಂದು ಉದ್ಘಾಟಿಸಿದರು.
ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಬೀದಿ ಬದಿ ವ್ಯಾಪಾರಸ್ಥರು ಹಿಂದಿನಿಂದಲೂ ಈ ತನಕ ಅನುಭವಿಸಿದ ಕಷ್ಟನಷ್ಟಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡುವುದರೊಂದಿಗೆ ವ್ಯಾಪಾರಸ್ಥರ ಪರ ರಸ್ತೆಗಿಳಿದು ಹೋರಾಟ ನಡೆಸಿದ್ದೇನೆ. ವ್ಯಾಪಾರಸ್ಥರು ಗ್ರಾಹಕರೊಂದಿಗೆ ಉತ್ತಮ ನಡವಳಿಕೆ ಮತ್ತು ಬಾಂಧವ್ಯ ಹೊಂದಿರಬೇಕಾಗಿದೆ. ಶಿಸ್ತು ಮತ್ತು ಸಂಯಮದೊಂದಿಗೆ ಗ್ರಾಹಕರೊಡನೆ ವ್ಯಾಪಾರ ನಡೆಸಬೇಕು ಎಂದು ಹೇಳಿದರು.
ವ್ಯಾಪಾರಸ್ಥರಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಚರ್ಚಿಸಿ ಸಹಕರಿಸಲಾಗುವುದು. ಸಮಸ್ಯೆಗೆ ಹೋರಾಟವೇ ಪ್ರಮುಖ ಅಸ್ತ್ರವಲ್ಲ, ಸಂಧಾನದ ಮೂಲಕ ಸಮಸ್ಯೆ ಇತ್ಯರ್ಥಗೊಳಿಸುವ ಸಾಧ್ಯತೆ ಹೆಚ್ಚು. ವ್ಯಾಪಾರಸ್ಥರು ಒಗ್ಗಟ್ಟಾಗಿ ಸಂಘಟನೆಗಳನ್ನು ಅನೋನ್ಯತೆಯಿಂದ ಬೆಳೆಸುವಂತೆ ಐವನ್ ಡಿಸೋಜಾ ಕರೆ ನೀಡಿದರು.
ಮಾಜಿ ಮೇಯರ್ ಕೆ.ಅಶ್ರಫ್ ಮುಖ್ಯ ಅತಿಥಿಯಾಗಿ ಮಾತನಾಡಿ, ನಾನು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಆಗಿದ್ದ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ನನ್ನಿಂದ ಹೆಚ್ಚಿನ ಸಹಕಾರವನ್ನು ನೀಡಿದ್ದೆ ಅಲ್ಲದೇ ಅವರ ಹೋರಾಟದಲ್ಲಿ ಭಾಗವಹಿಸಿದ್ದೆ ಆ ಕಾರಣಕ್ಕಾಗಿ ತನ್ನ ಮೇಲೆ ಕೇಸು ಕೂಡ ದಾಖಲಾಗಿದ್ದು 10ವರ್ಷಗಳ ಕಾಲ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದೆ. ಮುಂದೆ ನಿಮ್ಮ ಸಂಘಟನೆಯೊಂದಿಗೆ ನಾನು ಸದಾ ಸಹಕರಿಸುವುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಹಮ್ಮದ್ ರಫೀ ಹಾಗೂ ಸಂಘದ ಪದಾಧಿಕಾರಿಗಳು ಉಪ