×
Ad

ಅತ್ಯಾಚಾರ ಎಸಗಿ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ

Update: 2017-01-17 15:53 IST

ಮಂಗಳೂರು, ಜ.17: ಯುವತಿಯೋರ್ವಳನ್ನು ಅತ್ಯಾಚಾರ ಮಾಡಿ ಕೊಲೆಗೈದ ಆರೋಪಿಗೆ ಮಂಗಳೂರಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ.

61 ವರ್ಷದ ರವೀಂದ್ರನ್ ಆಲಿಯಾಸ್ ರವಿ ಶಿಕ್ಷೆಗೊಳಗಾದ ಅಪರಾಧಿ. ರವಿ 2014ರ ಜನವರಿಯಲ್ಲಿ ನಗರದ ವಸತಿಗೃಹವೊಂದರಲ್ಲಿ ಯುವತಿಯ ಮಾನಭಂಗ ಮಾಡಿ ಹತ್ಯೆ ಮಾಡಿ ಆಕೆಯ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಈ ಸಂಬಂಧ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿ ಕೇರಳದ ಪಾಲಕ್ಕಾಡ್  ಜಿಲ್ಲೆಯಲ್ಲಿರುವುದನ್ನು ಖಚಿತ ಪಡಿಸಿಕೊಂಡು ವಶಕ್ಕೆ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News