ಬಾಯಾರ್: ಇರ್ಫಾನಿಯಾ ಬೆಳ್ಳಿಹಬ್ಬದ ಸಂದೇಶ ಜಾಥಾಕೆ ಚಾಲನೆ
Update: 2017-01-17 16:04 IST
ಬಾಯಾರ್, ಜ.17: ಕೇರಳದ ಕಣ್ಣೂರು ಜಿಲ್ಲೆಯಲ್ಲಿರುವ ಇರ್ಫಾನಿಯ ಅರಬಿಕ್ ಕಾಲೇಜಿನ ಬೆಳ್ಳಿಹಬ್ಬದ ಪ್ರಚಾರಾರ್ಥ ನಡೆಯಲಿರುವ ಸಂದೇಶ ಜಾಥಾದ ಉದ್ಘಾಟನಾ ಸಮಾರಂಭ ಮಂಜೇಶ್ವರ ತಾಲೂಕಿನ ಬಾಯರ್‌ನ ಕಲಿಯಾರ್ ಸಮೀಪದ ರಹ್ಮತ್ ನಗರದಲ್ಲಿ ನಡೆಯಿತು.
ಮಂಜೇಶ್ವರದಿಂದ ಮಣ್ಣಾರ್‌ಕಾಡ್ ತನಕ ಹೊರಡಲಿರುವ ಸಂದೇಶ ಜಾಥಾವನ್ನು ಸಮಸ್ತ ಮುಶಾವರ ಸದಸ್ಯರಾದ ಎಂಎಂ ಖಾಸಿಂ ಮುಸ್ಲಿಯಾರ್ ಅವರು ಇರ್ಫಾನಿಯಾ ಅರಬಿಕ್ ಕಾಲೇಜಿನ ಪ್ರೋಫೆಸರ್ ಸಲೀಂ ಫೈಝಿ ಇರ್ಫಾನಿ ಅವರಿಗೆ ನೀಡಿ ಉದ್ಘಾಟಿಸಿದರು.
ಪಳ್ಳಿಕರೆ ಖಾಝೀ ಅಬ್ದುಲ್ ಖಾದರ್ ಮುಸ್ಲಿಯಾರ್ ಪೈವಳಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೂರ್ನಡ್ಕ ಮುದರ್ರಿಸ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಲೀಂ ಫೈಝಿ ಇರ್ಫಾನಿ ಅಲ್ ಅಝ್‌ಹರಿ ಉದ್ಭೋದನೆಗೈದರು. ಅಬ್ದುಲ್ ರಝಾಕ್ ಮಿಸ್ಬಾಹಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.