ಎಪಿಎಂಸಿ ಚುನಾವಣೆ ಗೆಲುವು : ಭರತೇಶ್ ಅಮೀನ್ ಹಾಗೂ ಮುತ್ತು ಶೆಟ್ಟಿಗೆ ಅಭಿನಂಧನೆ
ಉಳ್ಳಾಲ , ಜ.17 : ಎಪಿಎಂಸಿ ಚುನಾವಣೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಉಳ್ಳಾಲ ವ್ಯಾಪ್ತಿಯ ಅಭ್ಯರ್ಥಿಗಳಾದ ಕಾಂಗ್ರೆಸ್ ಬೆಂಬಲಿತ ಭರತೇಶ್ ಅಮೀನ್ ಹಾಗೂ ಮುತ್ತು ಶೆಟ್ಟಿ ಅವರನ್ನು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಭಿನಂದಿಸಲಾಯಿತು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಮಾತನಾಡಿ, ಈ ಭಾಗದ ಶಾಸಕ ಹಾಗೂ ಸಚಿವರಾದ ಯು.ಟಿ.ಖಾದರ್ ಅವರ ಅಭಿವೃದ್ಧಿ ಪರ ಕೆಲಸಗಳು, ಯೋಜನೆಗಳಿಂದ ಮತ್ತು ರಾಜ್ಯದ ಕಾಂಗ್ರೆಸ್ ನೇತೃತ್ವದ ಸರಕಾರದ ಜನಪರ ಯೋಜನೆಗಳಿಂದಾಗಿ ಈ ಬಾರಿಯ ಎಪಿಎಂಸಿ ಚುನಾವಣೆಯಲ್ಲಿ ಈ ಭಾಗದಲ್ಲಿ ಕಾಂಗ್ರೆಸ್ ಭರ್ಜರಿ ಜಯಬೇರಿ ಸಾಧಿಸಿದೆ. ಇದರಲ್ಲಿ ಜಯದ ಹಿಂದೆ ಕಾಂಗ್ರೆಸ್ ಕಾರ್ಯಕರ್ತರು ಹಗಲಿರುಳು ದುಡಿದು ಪರಿಶ್ರಮ ವಹಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಸದಾಶಿವ ಉಳ್ಳಾಲ್, ದ.ಕ.ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಟಿ.ಎಸ್.ಅಬ್ದುಲ್ಲಾ, ಕಾಂಗ್ರೆಸ್‌ನ ಉಮೇಶ್ಚಂದ್ರ, ಹರ್ಷರಾಜ್ ಮುದ್ಯ, ಹುಸೇನ್ ಕುಂಞಿ ಮೋನು, ದಿನೇಶ್ ಕುಂಪಲ, ಸುರೇಶ್ ಭಟ್‌ನಗರ, ಉಮ್ಮರ್ ಪಜೀರ್, ನಝರ್ ಷಾ, ಮುಹಮ್ಮದ್ ಮುಕ್ಕಚ್ಚೇರಿ, ನಾಸೀರ್ ಸಾಮಣಿಗೆ, ಸುರೇಖಾ ಚಂದ್ರಹಾಸ್ ಮುಂತಾದವರು ಉಪಸ್ಥಿತರಿದ್ದರು.
ಅಬ್ದುಲ್ ರಹಿಮಾನ್ ಕೋಡಿಜಾಲ್ ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿದರು.