×
Ad

ಟ್ಯಾಲೆಂಟ್‌ನಲ್ಲಿ ಟೈಲರಿಂಗ್ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಮತ್ತು ಹೊಲಿಗೆ ಯಂತ್ರಗಳ ವಿತರಣೆ

Update: 2017-01-17 19:44 IST

ಮಂಗಳೂರು, ಜ 17 :  ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಟೈಲರಿಂಗ್ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಹಾಗೂ ಹೊಲಿಗೆ ಯಂತ್ರಗಳ ವಿತರಣಾ ಸಮಾರಂಭವು ಕಂಕನಾಡಿಯಲ್ಲಿರುವ ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು.

ಸಮಾರಂಭವನ್ನು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ ಗಫೂರ್ ಉದ್ಘಾಟಿಸಿ, ನಿಗಮದಿಂದ ಸಿಗುವ ಸವಲತ್ತುಗಳ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಎಸ್.ಕೆ.ಎಸ್.ಎಸ್.ಎಫ್ ಬೋಳಿಯಾರ್ ಯುನಿಟ್ ಸಹಕಾರದಲ್ಲಿ ನಡೆಯುತ್ತಿದ್ದ ಟೈಲರಿಂಗ್ ಸೆಂಟರ್‌ನಲ್ಲಿ ಕಲಿತ ಹೆಣ್ಮಕ್ಕಳಿಗೆ ಸರ್ಟಿಫಿಕೇಟ್ ಹಾಗೂ 16 ಮಂದಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.

ಟೈಲರಿಂಗ್ ಶಿಕ್ಷಕಿ ದಿಲ್‌ಶಾದ್ ರವರನ್ನು ಮುಮ್ತಾರ್ ಪಕ್ಕಲಡ್ಕ ಮತ್ತು ಆತಿಕಾ ರಫೀಕ್ ಸನ್ಮಾನಿಸಿದರು.

ಮುಖ್ಯ ಅತಿಥಿಗಳಾಗಿ ಮದೀನಾದ ಉದ್ಯಮಿ ಅಬ್ದುಲ್ ಖಾದರ್ ವೆಲೆನ್ಸಿಯಾ, ನವಾರ್ ಟಿಂಬರ್‌ಲೈನ್, ಇ.ಕೆ ರಫೀಕ್, ಇ.ಕೆ ಟಿಂಬರ್ಸ್‌, ಉಮೈರ್ ರಿಬ್‌ಕೋ ಟ್ರೇಡರ್ಸ್‌, ಕೆ.ಎಂ.ಡಿ.ಸಿ ದ.ಕ ಜಿಲ್ಲಾ ವ್ಯವಸ್ಥಾಪಕ ಸಫ್ವಾನ್, ಉಡುಪಿ ಜಿಲ್ಲಾ ವ್ಯವಸ್ಥಾಪಕ ಶ್ರೀಧರ್ ಭಂಡಾರಿ, ಅಡ್ಯಾರ್ ಗ್ರಾಮ ಪಂಚಾಯತ್ ಸದಸ್ಯ ಸತ್ತಾರ್ ಅರ್ಕುಳ, ಟ್ಯಾಲೆಂಟ್ ಸಲಹೆಗಾರರಾದ ಸುಲೈಮಾನ್ ಶೇಖ್ ಬೆಳುವಾಯಿ ಮತ್ತು ಬಿ.ಎ ಅಕ್ಬರ್ ಅಲಿ ಭಾಗವಹಿಸಿದ್ದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ಯಾಲೆಂಟ್‌ನ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ವಹಿಸಿದ್ದರು. 

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಮೌಲಾನಾ ಹೈದರ್ ಅಲಿ ಖಿರಾಅತ್ ಪಠಿಸಿದರು.

ಟ್ಯಾಲೆಂಟ್‌ನ ಪ್ರಧಾನ ಕಾರ್ಯದರ್ಶಿ ಡಿ ಅಬ್ದುಲ್ ಹಮೀದ್ ಕಣ್ಣೂರು ಪ್ರಸ್ತಾವನೆಗೈದರು.

ಅಧ್ಯಕ್ಷ ರಿಯಾಝ್ ಕಣ್ಣೂರು ಸ್ವಾಗತಿಸಿದರು. ಮಜೀದ್ ತುಂಬೆ ಧನ್ಯವಾದಗೈದರು.

ಅಸ್ಲಂ ಗೂಡಿನಬಳಿ ಸರ್ಟಿಫಿಕೇಟ್ ವಾಚಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News