×
Ad

ಟರ್ಕಿ ನೈಟ್ ಕ್ಲಬ್ ದಾಳಿ ಅರೋಪಿಯ ಬಂಧನ

Update: 2017-01-17 20:03 IST

ಇಸ್ತಾಂಬುಲ್ (ಟರ್ಕಿ), ಜ. 16: ಬೃಹತ್ ಕಾರ್ಯಾಚರಣೆ ನಡೆಸಿರುವ ಟರ್ಕಿ ಪೊಲೀಸರು, ಹೊಸ ವರ್ಷದ ಮುನ್ನಾ ದಿನದಂದು ಇಲ್ಲಿನ ನೈಟ್‌ಕ್ಲಬ್ ಒಂದರಲ್ಲಿ 39 ಜನರನ್ನು ಕೊಂದವನೆಂದು ನಂಬಲಾದ ವ್ಯಕ್ತಿಯನ್ನು ಬಂಧಿಸಿದ್ದಾರೆ.

‘‘ಬಂಧಿತ ಭಯೋತ್ಪಾದಕನು ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ’’ ಎಂದು ಇಸ್ತಾಂಬುಲ್ ರಾಜ್ಯಪಾಲ ವಸಿಪ್ ಸಹಿನ್ ಸುದ್ದಿಗಾರರಿಗೆ ತಿಳಿಸಿದರು.ಬಂಧಿತನು ಉಝ್ಬೆಕಿಸ್ತಾನದಲ್ಲಿ ಜನಿಸಿರುವ ಅಬ್ದುಲ್‌ಗಡಿರ್ ಮಶರಿಪೊವ್ ಎಂಬುದಾಗಿ ಗುರುತಿಸಲಾಗಿದೆ.

ಶಂಕಿತನು ತನ್ನ ನಾಲ್ಕು ವರ್ಷದ ಮಗುವಿನೊಂದಿಗೆ ಇಸ್ತಾಂಬುಲ್‌ನ ಎಸನ್‌ಯುರ್ಟ್ ಜಿಲ್ಲೆಯಲ್ಲಿರುವ ಅಪಾರ್ಟ್‌ಮೆಂಟ್ ಒಂದರಲ್ಲಿ ಪತ್ತೆಯಾದನು ಎಂದು ಸರಕಾರಿ ಒಡೆತನದ ಟಿಆರ್‌ಟಿ ಟೆಲಿವಿಶನ್ ವರದಿ ಮಾಡಿದೆ.

ಹಂತಕನು ನರೆಮೇಧ ನಡೆಸಿದ ಬಳಿಕ ಎರಡು ವಾರಗಳಿಗೂ ಅಧಿಕ ಅವಧಿ ತಲೆಮರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದನು.

ಐಸಿಸ್ ಭಯೋತ್ಪಾದಕ ಸಂಘಟನೆಯು ದಾಳಿಯ ಹೊಣೆಯನ್ನು ಹೊತ್ತಿತ್ತು.

ಟರ್ಕಿ ಪೊಲೀಸರು ಮತ್ತು ಗುಪ್ತಚರ ಸಂಸ್ಥೆ ಎಂಐಟಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಶಂಕಿತನನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News