×
Ad

ಟ್ರಂಪ್ ಆಡಳಿತದ ಬಗ್ಗೆ ಸೌದಿ ‘ಆಶಾವಾದಿ’ : ವಿದೇಶ ಸಚಿವ

Update: 2017-01-17 20:09 IST

ಪ್ಯಾರಿಸ್, ಜ. 17: ಡೊನಾಲ್ಡ್ ಟ್ರಂಪ್ ಅಧ್ಯಕ್ಷತೆಯ ಅಮೆರಿಕದ ಬಗ್ಗೆ ಸೌದಿ ಅರೇಬಿಯ ಆಶಾಭಾವ ಹೊಂದಿದೆ ಎಂದು ಸೌದಿ ವಿದೇಶ ಸಚಿವ ಆದಿಲ್ ಅಲ್-ಜುಬೈರ್ ಸೋಮವಾರ ಹೇಳಿದ್ದಾರೆ.

ಸೌದಿ ಅರೇಬಿಯದ ಬದ್ಧ ಎದುರಾಳಿ ಇರಾನ್ ಬಗ್ಗೆ ಟ್ರಂಪ್ ತಳೆದಿರುವ ಕಠಿಣ ಧೋರಣೆ ಮತ್ತು ಐಸಿಸ್ ಸಂಘಟನೆಯನ್ನು ಹತ್ತಿಕ್ಕುವುದಾಗಿ ಅವರು ನೀಡಿರುವ ಭರವಸೆಯನ್ನು ಅವರು ಸ್ವಾಗತಿಸಿದ್ದಾರೆ.

‘‘ಜಗತ್ತಿನಲ್ಲಿ ಅಮೆರಿಕದ ಪಾತ್ರವನ್ನು ಮತ್ತೆ ಪ್ರತಿಷ್ಠಾಪಿಸುವುದಾಗಿ ಟ್ರಂಪ್ ತಂಡ ಹೇಳುತ್ತಿದೆ. ನಾವು ಇದನ್ನು ಸ್ವಾಗತಿಸುತ್ತೇವೆ’’ ಎಂದು ಪ್ಯಾರಿಸ್‌ಗೆ ಭೇಟಿ ನೀಡಿರುವ ಜುಬೈರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News