×
Ad

ಸುಪ್ರೀಂಗೆ ಕೇವಿಯೆಟ್ ಸಲ್ಲಿಸಿದ ಅಖಿಲೇಶ್

Update: 2017-01-17 22:20 IST

ಹೊಸದಿಲ್ಲಿ, ಜ.17: ಚುನಾವಣಾ ಆಯೋಗವು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಸೈಕಲ್ ಚಿಹ್ನೆ ನೀಡಿರುವುದನ್ನು ಪ್ರಶ್ನಿಸಿ ಮುಲಾಯಂ ಸಿಂಗ್ ಬಣ ಸುಪ್ರೀಂ ಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅಖಿಲೇಶ್ ಯಾದವ್ ಸುಪ್ರೀಂ ಕೋರ್ಟ್‌ಗೆ ಕೇವಿಯೆಟ್ ಸಲ್ಲಿಸಿದ್ದಾರೆ.
 ಮುಖ್ಯ ಮಂತ್ರಿ ಅಖಿಲೇಶ್ ಯಾದವ್ ಪರ ಪಕ್ಷದ ನಾಯಕರಾದ ರಾಮ್ ಗೋಪಾಲ್ ಯಾದವ್ ಅವರು ಇಂದು ಕೇವಿಯೆಟ್ ಸಲ್ಲಿಸಿದ್ದಾರೆ. ಸೈಕಲ್ ಚಿಹ್ನೆಯನ್ನು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ನೀಡಿರುವುದನ್ನು ಪ್ರಶ್ನಿಸಿ ಎದುರಾಳಿ ಮುಲಾಯಂ ಸಿಂಗ್ ಯಾದವ್ ಅವರ ಪಕ್ಷ ಅರ್ಜಿ ಸಲ್ಲಿಸಿದರೆ ಆ ಅರ್ಜಿಗೆ ಸಂಬಂಧಿಸಿ ಯಾವುದೇ ಆದೇಶ ನೀಡದಿರುವಂತೆ ಮನವಿ ಮಾಡಲಾಗಿದೆ.
  ಸೋಮವಾರ ಚುನಾವಣಾ ಆಯೋಗವು ಅಖಿಲೇಶ್ ಯಾದವ್ ಅವರು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೆಂದು ಪರಿಗಣಿಸಿ ಅವರ ಪಕ್ಷಕ್ಕೆ ಸೈಕಲ್ ಚಿಹ್ನೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News