ಆ್ಯಸಿಡ್ ಸೇವಿಸಿ ವ್ಯಕ್ತಿ ಆತ್ಮಹತ್ಯೆ
Update: 2017-01-17 22:24 IST
ಬೆಳ್ತಂಗಡಿ, ಜ.17 : ವೇಣೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ರಬ್ಬರ್ ಆ್ಯಸಿಡ್ ಸೇವಿಸಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
ಅಂಡಿಂಜೆ ಗ್ರಾಮದ ನೆಲ್ಲಿಂಗೇರಿ ಕಲ್ಲತ್ತಿಮನೆಯ ನಿವಾಸಿ ಜಯರಾಜ ಬಂಡಾರಿ (55) ಆತ್ಮಹತ್ಯೆ ಮಾಡಿಕೊಂಡವರು.
ವಿಪರೀತ ಕುಡಿತದ ಚಟವನ್ನು ಹೊಂದಿದ್ದ ಅವರು ಸೋಮವಾರ ರಾತ್ರಿ ಮನೆ ಹಿಂಬದಿಯಲ್ಲಿ ರಬ್ಬರ್ ಕೃಷಿಗೆ ತಂದಿರಿಸಲಾಗಿದ್ದ ಆ್ಯಸಿಡ್ ದ್ರಾವಣವನ್ನು ಕುಡಿದು ಬೊಬ್ಬೆ ಹೊಡೆದಾಗ ಮನೆಮಂದಿ ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಲಿಲ್ಲ.
ಮೃತರು ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಪುತ್ರ ಶ್ರೇಯಸ್ ನೀಡಿದ ದೂರಿನಂತೆ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.