×
Ad

ವೇಮುಲಾ ಪ್ರಕರಣ ವರದಿ: ಫ್ರಂಟ್‌ಲೈನ್ ವರದಿಗಾರನ ಬಂಧನ

Update: 2017-01-17 22:47 IST

ಹೈದರಾಬಾದ್,ಜ.17: ಇಲ್ಲಿನ ಹೈದಾಬಾದ್ ವಿವಿಯ ಆವರಣಕ್ಕೆ ವರದಿಗಾರಿಕೆಗಾಗಿ ತೆರಳಿದ್ದ ಅಂಗ್ಲ ಪತ್ರಿಕೆ ‘ಫ್ರಂಟ್‌ಲೈನ್’ನ ವರದಿಗಾರ ಕುನಾಲ್ ಶಂಕರ್‌ರನ್ನು ಸ್ಥಳೀಯ ಪೊಲೀಸರು ಮಂಗಳವಾರ ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ ಹಾಗೂ ಅವರ ವಿರುದ್ಧ ಅಕ್ರಮ ಪ್ರವೇಶದ ಮೊಕದ್ದಮೆ ದಾಖಲಿಸಿದ್ದಾರೆ.

ಫ್ರಂಟ್‌ಲೈನ್ ಪತ್ರಿಕೆಯ ಆಂಧ್ರ/ತೆಲಂಗಾಣ ಪ್ರತಿನಿಧಿಯಾದ ಶಂಕರ್ ಅವರು ಕಳೆದ ವರ್ಷ ನೇಣಿಗೆ ಶರಣಾದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಪ್ರಥಮ ಪುಣ್ಯತಿಥಿಯ ಹಿನ್ನೆಲೆಯಲ್ಲಿ ಇಂದು ಆಯೋಜಿಸಲಾಗಿದ್ದ ಕಾರ್ಯಕ್ರಮದ ವರದಿಗಾಗಿ ಹೈದರಾಬಾದ್ ವಿವಿಗೆ ಆಗಮಿಸಿದ್ದರು.
ಶಂಕರ್ ಅವರನ್ನು ವಶಕ್ಕೆ ತೆಗೆದುಕೊಂಡ ಗಾಚಿಬೊವ್ಲಿ ಠಾಣಾಪೊಲೀಸರು ಸುಮಾರು ಒಂದು ಗಂಟೆಗಳ ಕಾಲ ಅವರನ್ನು ಪ್ರಶ್ನಿಸಿದ್ದು, ಆನಂತರ ಬಿಡುಗಡೆಗೊಳಿಸಿದರೆಂದು ಮೂಲಗಳು ತಿಳಿಸಿವೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News