×
Ad

ಡೇಸ್ ಇನ್ ಡಯಾಸಿಸ್ ಕಾರ್ಯಕ್ರಮ ಸಮಾರೋಪ

Update: 2017-01-17 22:59 IST

ಕಾರ್ಕಳ, ಜ.17: ಮಂಗಳೂರು ಸಂತ ಜೋಸೆಫ್ ತಾಂತ್ರಿಕ ಮಹಾವಿದ್ಯಾ ಲಯದಲ್ಲಿ ನಡೆಯಲಿರುವ ಭಾರತೀಯ ಕೆಥೊಲಿಕ್ ಯುವ ಸಂಚಾಲನದ 10ನೆ ರಾಷ್ಟ್ರೀಯ ಯುವ ಸಮ್ಮೇಳನದ ಪೂರ್ವಭಾವಿಯಾಗಿ ಆಯೋಜಿಸ ಲಾದ ಡೇಸ್ ಇನ್ ಡಯಾಸಿಸ್ ಕಾರ್ಯಕ್ರಮದ ಸಮಾರೋಪ ಸಮಾ ರಂಭ ಮಂಗಳವಾರ ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ ನಡೆಯಿತು.

ಧರ್ಮಪ್ರಾಂತದ ವಿವಿಧ ಚರ್ಚ್‌ಗಳಲ್ಲಿ ನಾಲ್ಕು ದಿನಗಳ ಕಾಲ ಉಳಿದು ಕೊಂಡಿದ್ದ ದೇಶದ 11 ರಾಜ್ಯಗಳ 34 ಧರ್ಮಪ್ರಾಂತ್ಯಗಳ ಯುವ ಪ್ರತಿನಿಧಿ ಗಳು ಬೆಳಿಗ್ಗೆ ಕಾರ್ಕಳದಲ್ಲಿ ಒಟ್ಟಾಗಿ ಸೇರಿ ಸೌಹಾರ್ದ ಸಭಾಭವನದಿಂದ ಬಾಸಿಲಿಕಾದ ತನಕ ಪುಣ್ಯಕ್ಷೇತ್ರ ಪಾದಯಾತ್ರೆ ನಡೆಸಿದರು. ಬಳಿಕ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಪವಿತ್ರ ಬಲಿಪೂಜೆ ಜರುಗಿತು. ಉಡುಪಿ ಧರ್ಮಪ್ರಾಂತದ ವಿಕಾರ್ ಜನರಲ್ ಮೊನ್ಸಿಂಜ್ಞೋರ್ ಬ್ಯಾಪ್ಟಿಸ್ಟ್ ಮಿನೇಜಸ್ಮ್ ಪ್ರವಚನ ನೀಡಿದರು.

 ಸಮಾರೋಪ ಸಮಾರಂಭದಲ್ಲಿ ವಿವಿಧ ಧರ್ಮಪ್ರಾಂತದಿಂದ ಆಗಮಿಸಿದ ಯುವಪ್ರತಿನಿಧಿಗಳು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಉಡುಪಿ ಧರ್ಮಪ್ರಾಂತದ ವತಿಯಿಂದ ಕೂಡ ವಿವಿಧ ಮನೋರಂಜನಾ ಕಾರ್ಯಕ್ರಮಗಳೂ ಕೂಡ ನೆರವೇರಿದವು. ಕುಂದಾಪುರ ವಲಯ ಪ್ರಧಾನ ಧರ್ಮಗುರು ಹಾಗೂ ಐಸಿವೈಎಂ ಮಂಗಳೂರು ಧರ್ಮ ಪ್ರಾಂತದ ಮಾಜಿ ಯುವ ನಿರ್ದೇಶಕ ವಂ.ಅನಿಲ್ ಡಿಸೋಜ ರಾಷ್ಟ್ರೀಯ ಯುವ ಸಮ್ಮೇಳನ ಕುರಿತು ಮಾಹಿತಿ ನೀಡಿದರು. ಬಳಿಕ ಯುವಜನರನ್ನು ಮಂಗಳೂರಿನಲ್ಲಿ ನಡೆಯುವ ಯುವ ಸಮ್ಮೇಳನಕ್ಕೆ ಬೀಳ್ಕೊಡಲಾಯಿತು.

 ಉಡುಪಿ ಧರ್ಮಪ್ರಾಂತದ ಯುವ ನಿರ್ದೇಶಕ ವಂ ಎಡ್ವಿನ್ ಡಿಸೋಜ, ಸಂಪದ ಇದರ ನಿರ್ದೇಶಕ ವಂ.ರೆಜಿನಾಲ್ಡ್ ಪಿಂಟೊ, ಅತ್ತೂರು ಪುಣ್ಯಕ್ಷೇತ್ರದ ವಂ.ಜಾರ್ಜ್ ಡಿಸೋಜ, ವಂ.ವಿಜಯ್ ಡಿಸೋಜ, ಐಸಿವೈಎಂ ಅಧ್ಯಕ್ಷ ಲೊಯಲ್ ಡಿಸೋಜ, ಕಾರ್ದರ್ಶಿ ವಂ.ಫೆಲಿನಾ ಡಿಸೋಜ, ಮಹಿಳಾ ಸಚೇತಕಿ ಸಿಸ್ಟರ್ ಹಿಲ್ಡಾ ಮಸ್ಕರೇನ್ಹಸ್, ಸಚೇತಕ ವಾಲ್ಟರ್ ಡಿಸೋಜ, ಉಪಾಧ್ಯಕ್ಷ ಅರ್ಥರ್ ಡಾಯಸ್, ಮಾಜಿ ಅಧ್ಯಕ್ಷ ಡೆರಿಕ್ ಮಸ್ಕರೇನ್ಹಸ್, ಕೋಶಾಧಿಕಾರಿ ಡೊನ್ ಡಿಸೋಜ, ಪಿಆರ್‌ಒ ಒನಿಲ್ ಅಂದ್ರಾದೆ, ವಲಯ ಅಧ್ಯಕ್ಷರಾದ ವಿನೈಲ್ ಡಿಸೋಜ, ರೊಯ್‌ಸ್ಟನ್ ಡಿಸೋಜ, ಫ್ಲೆಕ್ಸನ್ ಡಿಸಿಲ್ವಾ, ವೆಲಿಡಾ ಮೆಂಡೊನ್ಸಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News