ಜ.19ರಂದು ಮಣ್ಣಂಕುಝಿಯಲ್ಲಿ ಸುರಿಬೈಲು ಉಸ್ತಾದ್ ಆಂಡ್ ನೇರ್ಚೆ
Update: 2017-01-18 11:11 IST
ಮಂಜೇಶ್ವರ, ಜ.18: ಸುರಿಬೈಲು ಉಸ್ತಾದ್ ಆಂಡ್ ನೇರ್ಚೆ ಹಾಗೂ ಜಲಾಲಿಯ್ಯಾ ರಾತೀಬ್ ಜ.19ರಂದು ಉಪ್ಪಳ ಸಮೀಪದ ಮಣ್ಣಂಕುಝಿಯಲ್ಲಿರುವ ಅವರ ನಿವಾಸದಲ್ಲಿ ನಡೆಯಲಿದೆ ಎಂದು ಮಂಜೇಶ್ವರ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜ.19ರಂದು ಸಂಜೆ 6:30ರಿಂದ ಆಂಡ್ ನೇರ್ಚೆ ಹಾಗೂ ಜಲಾಲಿಯ್ಯಾ ರಾತೀಬ್ ನಡೆಯಲಿದೆ. ಸೈಯದ್ ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್ ನೇತೃತ್ವ ನೀಡುವರು.
ಪಿ.ಎ.ಅಬ್ದುರ್ರಹ್ಮಾನ್ ಬಾಖವಿ ಅಲ್ ಜುನೈದಿ ದುಆಗೆ ನೇತೃತ್ವ ನೀಡುವರು. ಸುದ್ದಿಗೋಷ್ಠಿಯಲ್ಲಿ ಸಿ.ಅಬ್ದುಲ್ಲ ಮುಸ್ಲಿಯಾರ್, ಸಿ.ಎಚ್.ಯೂಸುಫ್ ಮದನಿ ಮೊಗ್ರಾಲ್, ಅಬ್ದುರ್ರಶೀದ್ ಹನೀಫಿ, ಅಬ್ದುಲ್ ಮಜೀದ್ ಸೇರಾಜೆ, ಅಬ್ದುಲ್ ಜಲೀಲ್ ಉಪಸ್ಥಿತರಿದ್ದರು.