×
Ad

ಜ.23, 24: ಮಂಜೇಶ್ವರದಲ್ಲಿ ಕ್ಯಾನ್ಸರ್ ರೋಗ ನಿಯಂತ್ರಣ, ನಿರ್ಮೂಲನ ಶಿಬಿರ

Update: 2017-01-18 11:33 IST


 ಮಂಜೇಶ್ವರ, ಜ.18: ಮಂಜೇಶ್ವರ ಬ್ಲಾಕ್ ಪಂಚಾಯತ್ ವ್ಯಾಪ್ತಿಯಲ್ಲಿ ಕ್ಯಾನ್ಸರ್ ರೋಗ ನಿಯಂತ್ರಣ ಹಾಗೂ ನಿರ್ಮೂಲನಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಬ್ಲಾಕ್ ಪಂಚಾಯತ್ ಅಧ್ಯಕ್ಷ ನೇತೃತ್ವದ ತಂಡ ಮಂಜೇಶ್ವರ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶಿಬಿರದ ಅಂಗವಾಗಿ ಜ.20 ಮತ್ತು 21ರಂದು ಮಂಜೇಶ್ವರ ಹಾಗೂ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ವಿವಿಧೆಡೆಗಳಲ್ಲಿ ಕಲಾ ಜಾಥಾ ನಡೆಯಲಿದೆ. 23ರಂದು ಮಂಗಲ್ಪಾಡಿ ಸಿ.ಎಚ್.ಸಿ.ಯಲ್ಲಿ ಮತ್ತು 24ರಂದು ಮಂಜೇಶ್ವರ ಸಿ.ಎಚ್.ಸಿ.ಯಲ್ಲಿ ಕ್ಯಾನ್ಸರ್ ನಿಯಂತ್ರಣ ಹಾಗೂ ನಿಮೂರ್ಲನಾ ಶಿಬಿರ ನಡೆಯಲಿದೆ ಎಂದವರು ವಿವರಿಸಿದರು.

 ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಉಪಾಧ್ಯಕ್ಷೆ ಮಮತಾ ದಿವಾಕರ್, ಮಂಜೆಶ್ವರ ಗ್ರಾಪಂ ಅಧ್ಯಕ್ಷ ಅಝೀಝ್ ಹಾಜಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಮುಸ್ತಫಾ ಉದ್ಯಾವರ, ಹೆಲ್ತ್ ಇನ್‌ಸ್ಪೆಕ್ಟರ್ ಮೋಹನನ್ ಉಪಸ್ಥಿತರಿದ್ದರು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News