ಪಾಕ್ ಜೊತೆ ಅಮೆರಿಕದ ಬಾಂಧವ್ಯ ಅತ್ಯಂತ ಸಂಕೀರ್ಣ: ಒಬಾಮ ಆಡಳಿತ
Update: 2017-01-18 20:38 IST
ವಾಶಿಂಗ್ಟನ್,ಜ.18: ಪಾಕಿಸ್ತಾನದ ಜೊತೆಗೆ ಅಮೆರಿಕದ ಬಾಂಧವ್ಯವು ಅಸಾಧಾರಣವಾದ ರೀತಿಯಲ್ಲಿ ಸಂಕೀರ್ಣವಾಗಿದೆಯೆಂದು ನಿರ್ಗಮನ ಒಬಾಮಾ ಆಡಳಿತವು ಬಣ್ಣಿಸಿದೆ ಹಾಗೂ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕವನ್ನು ಸುರಕ್ಷಿತವಾದ ಸ್ಥಳವನ್ನಾಗಿ ಮಾಡಲು ಆ ದೇಶದ ಜೊತೆ ಭಯೋತ್ಪಾದನೆ ನಿಗ್ರಹ ಸಹಕಾರವನ್ನು ಬಲಪಡಿಸಲಿದ್ದಾರೆಂಬ ಆಶಾವಾದವನ್ನು ಅದು ವ್ಯಕ್ತಪಡಿಸಿದೆ.
ವಿಶೇಷವಾಗಿ ಪಾಕಿಸ್ತಾನದ ಜೊತೆಗಿನ ರಾಷ್ಟ್ರೀಯ ಭದ್ರತೆಯ ವಿಷಯಕ್ಕೆ ಬಂದಾಗ ಅಮೆರಿಕವು ಆ ದೇಶದ ಜೊತೆ ಅಸಾಧಾರಣವಾದ ರೀತಿಯಲ್ಲಿ ಸಂಕೀರ್ಣವಾದ ಬಾಂಧವ್ಯವನ್ನು ಹೊಂದಿದೆಯೆಂದು ಶ್ವೇತಭವನದದ ಪತ್ರಿಕಾ ಕಾರ್ಯದರ್ಶಿ ಜೋಶ್ ಎರ್ನೆಸ್ಟ್ ಮಂಗಳವಾರ ತಿಳಿಸಿದ್ದಾರೆ.