×
Ad

ಅನಧಿಕೃತ ಕಟ್ಟಡ ಆರೋಪ: ಗ್ರಾಪಂನಿಂದ ನೋಟೀಸು

Update: 2017-01-18 21:04 IST

ಪಡುಬಿದ್ರಿ , ಜ.18 : ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪೆಜತ್ತಕಟ್ಟೆ ಎಂಬಲ್ಲಿ ದಾರುಲ್ ಅಮಾನ್ ಎಜುಕೇಶನಲ್ ಅಕಾಡೆಮಿ ಸಂಸ್ಥೆಯ ನಿರ್ಮಾಣ ಹಂತದಲ್ಲಿರುವ ಅನಾಥಾಲಯ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸುವಂತೆ ಅಲ್ಲದೆ ನಿರ್ಮಿಸಲು ನೀಡಿದ ಪರವಾನಿಗೆ ಅಸಿಂಧುಗೊಳಿಸಿ ಎಲ್ಲೂರು ಗ್ರಾಮ ಪಂಚಾಯಿತಿ ನೋಟೀಸು ನೀಡಿದ ಘಟನೆ ಬುಧವಾರ ನಡೆದಿದೆ.

ಇಲ್ಲಿನ ಹಿರಾ ನಗರದಲ್ಲಿ ದಾರುಲ್ ಅಮಾನ್ ಸಂಸ್ಥೆಯು ಜಾಗವನ್ನು ಖರೀದಿಸಿ ಅನಾಥಾಲಯ ನಿರ್ಮಿಸಲು 2015ರಲ್ಲಿ ಪರವಾನಿಗೆ ಪಡೆದಿತ್ತು. ಆದರೆ ಈ ಪರವಾನಿಗೆ ಅಕ್ರಮ ಮತ್ತು ಅಸಿಂಧು ಆಗಿದ್ದು, ಪಂಚಾಯತ್ ಅಭಿವೃದ್ಧಿ ಅಧಿಕಾರಿಯು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಹಿಂದೆ ಪಿಡಿಓ ಆಗಿದ್ದ ಬೆನ್ನಿ ಕ್ವಾಡ್ರಸ್ ಎಂಬವರು ಸಂಸ್ಥೆಯ ಅನಾಥಾಲಯ ಕಟ್ಟಡಕ್ಕೆ ಪರವಾನಿಗೆ ನೀಡಿದ್ದರು.

ಈ ಪರವಾನಿಗೆ ಎಲ್ಲೂರು ಗ್ರಾಮ ಪಂಚಾಯತಿಯ ಸರ್ವಸದಸ್ಯರ ಗಮನಕ್ಕೆ ತಾರದೆ ಸರ್ವಸದಸ್ಯರ ನಿರ್ಣಯಕ್ಕೆ ವಿರುದ್ಧಗಾಗಿದೆ. ಈ ಕಾರಣಕ್ಕಾಗಿ ಕಟ್ಟಡ ರಚನೆಯ ಪರವಾನಿಗೆಯು ಅಕ್ರಮ ಮತ್ತು ಅಸಿಂಧು ಆಗಿದೆ. ಈ ಬಗ್ಗೆ ಇದೇ 13ರಂದು ಕರೆಯಲಾದ ಸಭೆಯಲ್ಲಿ ಕೂಲಂಕುಶವಾಗಿ ಚರ್ಚಿಸಿ ಆಡಳಿತ ಮಂಡಳಿಯ ನಿರ್ಣಯಕ್ಕೆ ವಿರುದ್ಧವಾಗಿ ಒಂದು ವರ್ಷಗಳ ಹಿಂದೆ ನೀಡಿದ ಕಟ್ಟಡ ಪರವಾನಿಗೆ ಅಸಿಂಧು ಹಾಗೂ ಅಕ್ರಮ ಎಂದು ಘೋಷಿಸಿ ಸರ್ವಾನುಮತದಿಂದ ನಿರ್ಣಯಕೈಗೊಳ್ಳಲಾಗಿದೆ ಎಂದು ನೋಟೀಸಿನಲ್ಲಿ ತಿಳಿಸಲಾಗಿದೆ.

ನೋಟೀಸನ್ನು ನೀಡಲು ಅಲ್ಲಿ ಯಾರೂ ಇರದ ಕಾರಣ ಕಟ್ಟಡದ ಬಾಗಿಲಿಗೆ ಅಂಟಿಸಲಾಯಿತು.

ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಾಸಂತಿ ಮಧ್ವರಾಜ್, ಉಪಾಧ್ಯಕ್ಷ ಜಯಂತ್ ಕುಮಾರ್, ಸದಸ್ಯರಾದ ಸತೀಶ್ ಗುಡ್ಡಚ್ಚಿ, ಸಾಧು ಶೆಟ್ಟಿ, ರಾಜೇಂದ್ರ, ಕಿಶೋರ್ ಕುಂಜೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News