×
Ad

ಬಿಜೆಪಿ ಮುಖಂಡರಿಂದ ಗೂಂಡಾಗಿರಿ ಪ್ರದರ್ಶನ : ವಲೇರಿಯನ್ ಸಿಕ್ವೇರಾ ಆರೋಪ

Update: 2017-01-18 21:12 IST

ಮೂಡುಬಿದಿರೆ, ಜ.18 : ಎಪಿಎಂಸಿ ಚುನಾವಣೆಯ ವಿಜಯೋತ್ಸವದ ಸಂದರ್ಭದಲ್ಲಿ ಹೊಸಬೆಟ್ಟು ಸಮೀಪದ ಮಾಸ್ತಿಕಟ್ಟೆ0ುಲ್ಲಿ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿ ಮುಖಂಡರು ಬಲವಂತದಿಂದ ಬಿಡುಗಡೆಗೊಳಿಸಲು ಪ್ರಯತ್ನಿಸಿ ಗೂಂಡಾಗಿರಿ ಪ್ರದರ್ಶಿಸಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ ಆರೋಪಿಸಿದ್ದಾರೆ.

 ಅವರು ಬುಧವಾರದಂದು ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿ0ುಲ್ಲಿ ಮಾತನಾಡಿದರು.

ಚಂದ್ರಹಾಸ್ ಸನಿಲ್‌ರ ಕಟುಂಬಕ್ಕೆ ಸೇರಿದ ಹೊಸಬೆಟ್ಟುವಿನಲ್ಲಿರುವ ದೇವಸ್ಥಾನಕ್ಕೆ ಹೋಗುವ ದಾರಿ0ುಲ್ಲಿ ವಿಜಯೋತ್ಸವ ಆಚರಿಸುತ್ತಿದ್ದಾಗ ಬಿಜೆಪಿಯ ವಲೇರಿಯನ್ ಕುಟಿನ್ಹಾ ಅಲ್ಲಿಗೆ ಬಂದು ಉದ್ದೇಶಪೂರಕವಾಗಿ ಜಗಳಕ್ಕಿಳಿದು ವಿವಾದ ಸೃಷ್ಟಿಸಿದ್ದರು. ಬಿಜೆಪಿಗರಿಂದ ಹಲ್ಲೆಗೊಳಗಾಗಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಕೃಷ್ಣ ಮತ್ತು ಸತೀಶ್ ಮಡಿವಾಳರಲ್ಲಿಗೆ ಬಿಜೆಪಿಯ  ಜಗದೀಶ್ ಅಧಿಕಾರಿ, ಉಮನಾಥ ಕೋಟ್ಯಾನ್, ಈಶ್ವರ ಕಟೀಲು, ಸುಚರಿತ ಶೆಟ್ಟಿ, ಜೋಯ್ಲಸ್ ಮತ್ತಿತರರು ತೆರಳಿ ‘ನಿಮಗೇನು ಆಗಲಿಲ್ಲ, ಹೊರಹೋಗಿ?ಎಂದು ಬಲವಂತಪಡಿಸಿದಲ್ಲದೆ ಕೊಲೆಬೆದರಿಕೆ0ೊಡ್ಡಿ ಬಿಡುಗಡೆಗೆ ಪ್ರಯತ್ನಿಸಿದ್ದರು. ಈ ದೃಶ್ಯ ಆಸ್ಪತ್ರೆಯ  ಸಿಸಿ ಕೆಮರಾದಲ್ಲಿ ದಾಖಲಾಗಿದೆ ಎಂದರು.

   ಕಾಂಗ್ರೆಸ್‌ನ ಚಂದ್ರಹಾಸ್ ಸನಿಲ್ ವಿರುದ್ಧ ಈ ಹಿಂದೆ ಪೊಲೀಸ್‌ ಠಾಣೆ0ುಲ್ಲಿ ಕ್ರಿಮಿನಲ್ ಕೇಸ್ ಇಲ್ಲ. ಆದರು ಅವರನ್ನು ಗೂಂಡಾ ಎಂದು ಆರೋಪಿಸಿರುವ ಬಿಜೆಪಿ ಮುಖಂಡರೊಬ್ಬರ ಮೇಲೆ ಬಜಪೆ ಪೊಲೀಸ್‌ಠಾಣೆಯಲ್ಲಿ ದಾಖಲಾದ ಕ್ರಿಮಿನಲ್ ಕೇಸು ಅವರ ಗೂಂಡಾ ನಡವಳಿಕೆಗೆ ಸಾಕ್ಷಿ. ಶಾಸಕ ಅಭ0ುಚಂದ್ರ, ಎಪಿಎಂಸಿ ಸದಸ್ಯ ಚಂದ್ರಹಾಸ್ ಸನಿಲ್‌ರನ್ನು ಗೂಂಡಾ ಎಂದು ಕರೆದ ಬಿಜೆಪಿಗರು ತಮ್ಮ ಶರ್ಟ್ ಬಿಚ್ಚಿ ಬೆನ್ನು ನೋಡಿದರೆ ಗೂಂಡಾಗಳೆಂದು ಗೊತ್ತಾಗುತ್ತದೆ ಎಂದು ಟೀಕಿಸಿದರು.

ಮೂಡುಬಿದಿರೆ0ು ಹನುಮಂತ ದೇವಸ್ಥಾನಕ್ಕೆ ಇದುವರೆಗೆ ಹೋಗದ ಕೆಲ ಬಿಜೆಪಿಗರು ಮೊನ್ನೆ ಭೇಟಿ ನೀಡಿ ಸೀಯಾಳಾಭಿಷೇಕ ಮಾಡಿದ್ದಾರೆ. ಹೊಸಬೆಟ್ಟು ಘಟನೆ0ು ಸತ್ಯಾಂಶ ಹೊರಬರಲು ನಾವು ಕೂಡ ಪ್ರಕರಣವನ್ನು ಹನಮಂತನ ಸನ್ನಿಧಿಗೆ ಬಿಟ್ಟಿದ್ದೇವೆ ಎಂದು ಸುರೇಶ್ ಕೋಟ್ಯಾನ್ ಹೇಳಿದರು.

ಪುರಸಭಾ ಉಪಾಧ್ಯಕ್ಷ ವಿನೋದ್ ಸೆರಾವೋ, ಕಾಂಗ್ರೆಸ್ ಮುಖಂಡರಾದ ರತ್ನಾಕರ ಮೊಯಿಲಿ. ಜೊಸ್ಸಿ ಮಿನೇಜಸ್, ಮೂಡುಬಿದಿರೆ ವಲಯದ ಮಹಿಳಾ ಅಧ್ಯಕ್ಷೆ ಸುಪ್ರಿಯ  ಡಿ. ಶೆಟ್ಟಿ, ಸುಂದರ ಸಿ. ಪೂಜಾರಿ  ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News