ಗಂಧದ ಮರ ಕಳ್ಳತನ
Update: 2017-01-18 21:14 IST
ಕೊಣಾಜೆ , ಜ.18 : ಮುಡಿಪುವಿನ ಜನಶಿಕ್ಷಣ ಟ್ರಸ್ಟ್‌ನ ಆವರಣದೊಳಗೆ ಬೆಳೆದಿದ್ದ ಗಂಧದ ಮರವೊಂದನ್ನು ಮಂಗಳವಾರ ರಾತ್ರಿ ಕಳ್ಳರು ಕಡಿದು ಕದ್ದೊಯ್ದ ಘಟನೆ ನಡೆದಿದೆ.
ಜನಶಿಕ್ಷಣ ಟ್ರಸ್ಟ್‌ನ ಜಮೀನಿನ ಆವರಣದೊಳಗೆ ಬೆಳೆದಿದ್ದ ಗಂಧದ ಮರವನ್ನು ಕಳ್ಳರು ರಾತ್ರಿಯ ವೇಳೆಯಲ್ಲಿ ಯಾರಿಗೂ ತಿಳಿಯದಂತೆ ಬ್ಲೇಡ್‌ನಲ್ಲಿ ತುಂಡರಿಸಿ ಮರದ ಬೇರುಗಳನ್ನೂ ಕದ್ದೊಯ್ದಿದ್ದಾರೆ. ಮರ ತುಂಡರಿಸಲು ಬಳಸಿದ್ದ ಮೂರು ಬ್ಲೇಡ್‌ಗಳನ್ನು ಕಳ್ಳರು ಅಲ್ಲೇ ಬಿಟ್ಟು ಹೋಗಿದ್ದಾರೆ.
ಈ ಬಗ್ಗೆ ಜನಶಿಕ್ಷಣ ಟ್ರಸ್ಟ್‌ನ ಅಧಿಕಾರಿಗಳು ಅರಣ್ಯ ಇಲಾಖೆಗೆ ಹಾಗೂ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ.