ಕಳವು ಆರೋಪಿಯ ಬಂಧನ
Update: 2017-01-18 21:17 IST
ಉಡುಪಿ, ಜ.18: ಕಳವುಗೈದ ಸೊತ್ತನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಉಡುಪಿ ನಗರ ಪೊಲೀಸರು ಜ.17ಂದು ಸಂಜೆ ವೇಳೆ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಬಂಧಿಸಿದ್ದಾರೆ.
ಬಂಧಿತನನ್ನು ಧಾರವಾಡದ ಪರಮಾನಂದ ಮರಿಯಪ್ಪ ಬೂದಿಹಾಳ (31) ಎಂದು ಗುರುತಿಸಲಾಗಿದೆ.
ಈತ ಶ್ರೀಕೃಷ್ಣ ಮಠದ ಪಾರ್ಕಿಂಗ್ ಸ್ಥಳದ ಶೌಚಾಲಯದ ಬಳಿ ಅದೇ ದಿನ ಬೆಳಗ್ಗೆ ವ್ಯಕ್ತಿಯೊಬ್ಬರ ಬ್ಯಾಗಿನಿಂದ ವಿಡಿಯೋ ಕ್ಯಾಮೆರಾವನ್ನು ಕಳವು ಮಾಡಿದ್ದು, ಅದನ್ನು ಸಂಜೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದನು. ಈ ಬಗ್ಗೆ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತನಿಂದ ಸೋನಿ ಕಂಪೆನಿಯ ಹ್ಯಾಂಡಿ ಕ್ಯಾಮ್ ಹಾಗೂ 2 ಚಾರ್ಜರ್ಗಳನ್ನು ಪೊಲೀಸರು ವಶಪಡಿಸಿಕೊಂಡಿ ದ್ದಾರೆ. ಇವುಗಳ ಒಟ್ಟು ಮೌಲ್ಯ 10ಸಾವಿರ ರೂ. ಎಂದು ಅಂದಾಜಿಸ ಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.