×
Ad

ಮಹಿಳೆಯ ಅತ್ಯಾಚಾರ; ಆರೋಪಿ ಬಂಧನ

Update: 2017-01-18 22:16 IST

ಮಂಗಳೂರು, ಜ. 18: ಮಹಿಳೆಯೋರ್ವರರನ್ನು ಮದುವೆಯಾಗುವುದಾಗಿ ನಂಬಿಸಿ ಪುಸಲಾಯಿಸಿ ಅತ್ಯಾಚಾರವೆಸಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಹಿಳಾ ಪೊಲೀಸ್ ಠಾಣಾಧಿಕಾರಿ ಬಂಧಿಸಿದ್ದಾರೆ.

ಕೋಡಿಕ್ಕಲ್‌ನ ಮಣಿಕಂಠ (21) ಬಂಧಿತ ಆರೋಪಿ.

2016ರ ನವೆಂಬರ್‌ನಲ್ಲಿ ಈತ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಆರೋಪಿಯು ಘಟನೆಯ 6 ತಿಂಗಳ ಹಿಂದಿನಿಂದ ಸಂತ್ರಸ್ತೆಯ ಮೊಬೈಲ್ ಸಂಪರ್ಕದಲ್ಲಿದ್ದನೆಂದು ಹೇಳಲಾಗಿದ್ದು, ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ಬಳಿಕ ತಲೆಮರೆಸಿಕೊಂಡಿದ್ದನೆಂದು ಹೇಳಲಾಗಿದೆ.
ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳಾ ಠಾಣಾಧಿಕಾರಿ ಆರೋಪಿಯನ್ನು ನಗರದ ಚಿಲಿಂಬಿಯಲ್ಲಿ ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News