ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷರಾಗಿ ಮುನೀರ್ ಸಖಾಫಿ ಆಯ್ಕೆ
ಕೊಣಾಜೆ, ಜ.18 : ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಇದರ ಮಹಾಸಭೆಯು ಸಯ್ಯಿದ್ ಸಿ.ಟಿ.ಎಂ ತಂಙಳ್ ಬೋಳಿಯಾರ್ ಉಸ್ತಾದರ ದುಆದೊಂದಿಗೆ ಡಿವಿಷನ್ ಅಧ್ಯಕ್ಷ ಉಮರ್ ಅಹ್ಸನಿ ಇನೋಳಿ ಇವರ ಅಧ್ಯಕ್ಷತೆಯಲ್ಲಿ ಅಲ್ ಮದೀನಾ ಹಾಲ್ ತಿಬ್ಲೆಪದವಿನಲ್ಲಿ ಎಸ್.ಜೆ.ಎಂ ದೇರಳಕಟ್ಟೆ ರೇಂಜ್ ಅಧ್ಯಕ್ಷ ಇಸ್ಮಾಯಿಲ್ ಸಅದಿ ಉರ್‌ಮಣೆ ಇವರ ಉದ್ಘಾಟನೆಯೊಂದಿಗೆ ಇತ್ತೀಚೆಗೆ ನಡೆಯಿತು.
ಎಸ್ಸೆಸ್ಸೆಫ್ ದ.ಕ ಜಿಲ್ಲಾ ಅಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ ನಾವೂರು ವೀಕ್ಷಕರಾಗಿ ಆಗಮಿಸಿ ತರಗತಿಯನ್ನು ಮಂಡಿಸಿದರು.
ಡಿವಿಷನ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವುರವರ ವರದಿ ಹಾಗೂ ಲೆಕ್ಕಪತ್ರ ಮಂಡನೆ ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಅಧ್ಯಕ್ಷರಾಗಿ ಮುನೀರ್ ಸಖಾಫಿ ಉಳ್ಳಾಲ, ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್ ಮುಡಿಪು, ಕೋಶಾಧಿಕಾರಿಯಾಗಿ ಹಮೀದ್ ತಲಪಾಡಿ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಇಲ್ಯಾಸ್ ಪೊಟ್ಟೊಳಿಕೆ, ಉಪಾಧ್ಯಕ್ಷರುಗಳಾಗಿ ಜಮಾಲುದ್ದೀನ್ ಸಖಾಫಿ ಮುದುಂಗಾರುಕಟ್ಟೆ, ಫಾರೂಕ್ ಸಖಾಫಿ ಮದನಿ ನಗರ, ಜೊತೆ ಕಾರ್ಯದರ್ಶಿಗಳಾಗಿ ಸಯ್ಯಿದ್ ಕುಬೈಬ್ ತಂಙಳ್, ಸಫೀರ್ ರೇಂಜಾಡಿ ಹಾಗೂ ಇತರ 19 ಕಾರ್ಯಕಾರಿ ಸದಸ್ಯರನ್ನು ಆಯ್ಕೆಮಾಡಲಾಯಿತು.
ಸಯ್ಯಿದ್ ಕುಬೈಬ್ ತಂಙಳ್ ಸ್ವಾಗತಿಸಿದರು. ಕೊನೆಗೆ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ವಂದಿಸಿದರು.