ಇಂದು ಗಣೇಶ್ ಮೆಡಿಕಲ್ಸ್ ಆ್ಯಂಡ್ ಸೂರ್ಯ ಲ್ೈಕೇರ್ ಉದ್ಘಾಟನೆ

Update: 2017-01-18 18:51 GMT

ಮಂಗಳೂರು, ಜ.18: ಔಷಧ ಮಾರಾಟಕ್ಕೆ ಹೆಸರುವಾಸಿಯಾಗಿರುವ ಗಣೇಶ್ ಮೆಡಿಕಲ್ಸ್‌ನ ನೂತನ ಮಳಿಗೆ ‘ಗಣೇಶ್ ಮೆಡಿಕಲ್ಸ್ ಆ್ಯಂಡ್ ಲ್ೈಕೇರ್’ ಜ.19ರಂದು ನಗರದ ಪಂಪ್‌ವೆಲ್‌ನ ಕ್ಲಾಸಿಕ್ ಗೇಟ್‌ವೇ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ.

ಜ.19ರಂದು ಬೆಳಗ್ಗೆ 9:30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್, ಅವರ್ ಲೇಡಿ ಆ್ ದಿ ಹೋಲಿ ರೊಸಾರಿಯೊ ಕೆಥೆಡ್ರಲ್‌ನ ಧರ್ಮಗುರು ವಂ. ಜೆ.ಬಿ.ಕ್ರಾಸ್ತಾ ಆಶೀರ್ವಚನ ನೀಡುವರು. ಮುಖ್ಯ ಅತಿಥಿಗಳಾಗಿ ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಟ್ರಸ್ಟಿ ಕೆ.ಸಿ.ನಾಕ್ ಮತ್ತು ತಾರಾಕ್ಷಿ ನಾರಾಯಣನ್ ಭಾಗವಹಿಸಲಿದ್ದಾರೆ.

ಎಲ್ಲ ವಿಧದ ಔಷಧಗಳೂ ಲಭ್ಯ

1973ರಲ್ಲಿ ಸದಾನಂದ ಶೆಟ್ಟಿಯವರಿಂದ ಸ್ಥಾಪಿಸಲ್ಪಟ್ಟ ಗಣೇಶ್ ಮೆಡಿಕಲ್ಸ್ ದ.ಕ. ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಗಳು ಹಾಗೂ ಕೇರಳದ ಕಾಸರಗೋಡು, ಕಣ್ಣೂರು ಮತ್ತು ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ಹೆಸರುವಾಸಿಯಾಗಿದೆ. ಬಳಿಕ ಸಹಸಂಸ್ಥೆಯಾಗಿ 2009ರಲ್ಲಿ ಜೀವರಕ್ಷಕ ಔಷಧ ವಿತರಣಾ ಸಂಸ್ಥೆ ‘ಸೂರ್ಯ ಲ್ೈಕೇರ್’ ಆರಂಭಗೊಂಡಿತು. ಎಲ್ಲ ವಿಧದ ಔಷಧಗಳು ಹಾಗೂ ಬೇರೆ ಕಡೆಗಳಲ್ಲಿ ವಿರಳವಾಗಿ ಸಿಗುವಂತಹ ಔಷಧಗಳನ್ನು ಒದಗಿಸುವ ಮೂಲಕ ಈ ಸಂಸ್ಥೆ ಹೆಸರುವಾಸಿಯಾಗಿದೆ.

ಜೀವರಕ್ಷಕ ಔಷಧಗಳ ಕೊರತೆ ಹಾಗೂ ಸೂರ್ಯ ಲ್ೈಕೇರ್‌ನ ಯಶಸ್ಸಿನ ಹಿನ್ನೆಲೆಯಲ್ಲಿ ಮಣಿಪಾಲ ಮತ್ತು ಕಾಸರಗೋಡಿನಲ್ಲಿ ಸಂಸ್ಥೆಯು ಶಾಖೆಗಳನ್ನು ತೆರೆದು ಯಶಸ್ವಿಯಾಯಿತು. ಬೆಳೆಯುತ್ತಿರುವ ಮಂಗಳೂರು ಮಹಾನಗರದಲ್ಲಿ ಉತ್ತಮ ಗುಣಮಟ್ಟದ ಅಂತಾರಾಷ್ಟ್ರೀಯ ಮಾದರಿಯ ಔಷಧ ಮಳಿಗೆ ಅಗತ್ಯ ಎನ್ನುವ ನಿಟ್ಟಿನಲ್ಲಿ ಪಂಪ್‌ವೆಲ್‌ನಲ್ಲಿ ವಿಶಾಲ ಮಳಿಗೆಯನ್ನು ತೆರೆಯಲು ಉದ್ದೇಶಿಸಲಾಗಿದೆ. ನೂತನ ಮಳಿಗೆ ವಿಶಾಲವಾಗಿದ್ದು, ಸಂಪೂರ್ಣ ಹವಾನಿಯಂತ್ರಿತವಾಗಿದೆ.

ಪಂಪ್‌ವೆಲ್‌ನ ನೂತನ ಮಳಿಗೆ ಜ.19ರಂದು ಉದ್ಘಾಟನೆಗೊಂಡರೂ ಗ್ರಾಹಕರ ಸೇವೆಗೆ ಮುಂದಿನ ವಾರ ತೆರೆದುಕೊಳ್ಳಲಿದೆ. ಸದಾನಂದ ಶೆಟ್ಟಿ ದಂಪತಿಯ ಮಾರ್ಗದರ್ಶನ, ಕುಟುಂಬದ ಸದಸ್ಯರ ಸಹಕಾರ, ದಕ್ಷ ಮತ್ತು ಅನುಭವಿ ಸಿಬ್ಬಂದಿಯ ಸೇವೆ ಗ್ರಾಹಕರಿಗೆ ಇಲ್ಲಿ ಲಭ್ಯವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News