" ಮುಂದಿನ 4 ವರ್ಷ ಪಶ್ಚಾತ್ತಾಪ ಪಡುವಿರಿ"

Update: 2017-01-19 03:48 GMT

ವಾಷಿಂಗ್ಟನ್, ಜ.19: "ಮುಂದಿನ ನಾಲ್ಕು ವರ್ಷ ನೀವು ಪಶ್ಚಾತ್ತಾಪಪಡುತ್ತೀರಿ" -ಇದು ಅನಾಮಧೇಯ ಹ್ಯಾಕರ್ ಗ್ರೂಪ್ ಅಮೆರಿಕದ ಚುನಾಯಿತ ಅಧ್ಯಕ್ಷ ಹಾಗೂ ಕೋಟ್ಯಧಿಪತಿ ಡೊನಾಲ್ಡ್ ಟ್ರಂಪ್ ಅವರಿಗೆ ನೀಡಿರುವ ಬಹಿರಂಗ ಎಚ್ಚರಿಕೆ.

ಎಲ್ಲ ಅನುಯಾಯಿಗಳು ಇದೀಗ ಕಾರ್ಯಾಚರಣೆಗೆ ಇಳಿಯಬೇಕು. ಹೊಸ ನಾಯಕನ ವಿರುದ್ಧ ಯಾವುದೇ ಮಾಹಿತಿಗಳನ್ನಾದರೂ ಬಹಿರಂಗಗೊಳಿಸಲು ಮುಂದಾಗಬೇಕು ಎಂದು ಟ್ವಿಟ್ಟರ್‌ನಲ್ಲಿ ಈ ಗುಂಪು ಕರೆ ನೀಡಿದೆ.

ಟ್ರಂಪ್ ಪದೇಪದೇ ನಿರಾಕರಿಸುತ್ತಿರುವ ಆರೋಪವನ್ನು ಈ ಗ್ರೂಪ್ ಪುನರುಚ್ಚರಿಸಿದ್ದು, "ಟ್ರಂಪ್‌ಗೆ ರಷ್ಯಾದ ಗಲಭೆಕೋರರು, ಮಕ್ಕಳ ಕಳ್ಳ ಸಾಗಾಣೆದಾರರು ಹಾಗೂ ಹಣ ವಂಚನೆ ಜಾಲದ ಜತೆ ಹಣಕಾಸು ಹಾಗೂ ವೈಯಕ್ತಿಕ ಸಂಬಂಧಗಳಿವೆ" ಎಂದಿದೆ.

"ಇದು 80ರ ದಶಕವಲ್ಲ; ಮಾಹಿತಿ ಎಲ್ಲೂ ಸಾಯುವುದಿಲ್ಲ. ಎಲ್ಲವೂ ಬಹಿರಂಗವಾಗುತ್ತದೆ. ಮುಂದಿನ ನಾಲ್ಕು ವರ್ಷ ಕಾಲ ನೀವು ಪಶ್ಚಾತ್ತಾಪಪಡುತ್ತೀರಿ" ಎಂದು ಟ್ವೀಟ್ ಮಾಡಲಾಗಿದೆ. ಆದರೆ ಇದನ್ನು ಟ್ರಂಪ್ ನಿರ್ಲಕ್ಷಿಸಿದ್ದಾರೆ.

ಕಳೆದ ಮಾರ್ಚ್‌ನಲ್ಲಿ ಟ್ರಂಪ್ ಅವರಿಗೆ ಸಂಬಂಧಿಸಿದ ತೀರಾ ವೈಯಕ್ತಿಕ ದಾಖಲೆಗಳನ್ನು ಹ್ಯಾಕರ್‌ಗಳು ಬಹಿರಂಗಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News