×
Ad

ಫರಂಗಿಪೇಟೆಯಲ್ಲಿ ಎರಡು ಎಕ್ರೆ ಗುಡ್ಡೆ ಬೆಂಕಿಗಾಹುತಿ

Update: 2017-01-19 12:35 IST

ಬಂಟ್ವಾಳ, ಜ. 19: ಫರಂಗಿಪೇಟೆ ಸಮೀಪದ 10ನೆ ಮೈಲುಗಲ್ಲಿನಲ್ಲಿ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಹಿಡಿದ ಪರಿಣಾಮ ಸುಮಾರು ಒಂದು ಎಕರೆಯಷ್ಟು ಮರ ಗಿಡ ಸುಟ್ಟು ಕರಕಳವಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. 

ರಾಷ್ಟ್ರೀಯ ಹೆದ್ದಾರಿ 75ರ ಹತ್ತನೆ ಮೈಲುಗಲ್ಲಿನಲ್ಲಿ ಅಮೆಮಾರ್ ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಎಡಭಾಗದಲ್ಲಿ ಗುಡ್ಡವನ್ನು ಸಮತಟ್ಟು ಮಾಡುವ ಉದ್ದೇಶದಿಂದ ಮರಗಳನ್ನು ಕಡಿದು ಹಾಕಲಾಗಿದೆ. ಕಡಿದ ಮರದ ಕೊಂಬೆಗಳು ಹಾಗೂ ಒಣ ಹುಲ್ಲಿಗೆ ಇಂದು ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ ಗುಡ್ಡದಲ್ಲಿದ್ದ ಸಣ್ಣಪುಟ್ಟ ಮರ ಗಿಡಗಳು ಬೆಂಕಿಗೆ ಸುಟ್ಟು ಕರಕಲವಾಗಿವೆ. 

ಗುಡ್ಡದ ಸುತ್ತಲೂ ವಸತಿ ಸಮುಚ್ಚಯ ಹಾಗೂ ವಾಸದ ಹತ್ತಾರು ಮನೆಗಳಿದ್ದು, ಬೆಂಕಿಯಿಂದ ಪರಿಸರದಲ್ಲಿ ದಟ್ಟ ಹೊಗೆ ಆವರಿಸಿದ್ದರಿಂದ ಸ್ಥಳೀಯರು ಕೆಲ ಕಾಲ ಭಯಭೀತರಾಗಿ ಆತಂಕದ ವಾತಾವರಣ ನಿರ್ಮಾಣವಾಯಿತು. 

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಂಗಳೂರು ರಮೇಶ್ ನೇತೃತ್ವದ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಒಂದು ಗಂಟೆಯ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಬೆಂಕಿ ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿಯೊಂದಿಗೆ ಪುದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮುಹಮ್ಮದ್‌ ಹಾಶೀರ್ ಸಹಿತ ಸ್ಥಳೀಯರು ಸಹಕಾರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News