×
Ad

ಪ್ರಮಾಣ ವಚನದ ‘ಭಾಷಣ ಬರೆಯುತ್ತಿರುವ’ ಫೋಟೋ ಟ್ವೀಟ್ ಮಾಡಿ ನಗೆಪಾಟಲಿಗೀಡಾದ ಟ್ರಂಪ್

Update: 2017-01-19 12:42 IST

ವಾಷಿಂಗ್ಟನ್, ಜ.19: ಅಮೆರಿಕನ್ನರು ತಮ್ಮ ನೆಚ್ಚಿನ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ವಿದಾಯ ಹೇಳಲು ಸಿದ್ಧರಾಗುತ್ತಿದ್ದಂತೆಯೇ ಡೊನಾಲ್ಡ್ ಟ್ರಂಪ್ ಅಮೆರಿಕದ 45ನೆ ಅಧ್ಯಕ್ಷರಾಗಿ ಜನವರಿ 20, ಶುಕ್ರವಾರದಂದು ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗುತ್ತಿದ್ದಾರೆ. ಅವರು ಅಮೆರಿಕ ಅಧ್ಯಕ್ಷರಾಗಿ ನೀಡಲಿರುವ ತಮ್ಮ ಪ್ರಪ್ರಥಮ ಭಾಷಣ ಕೇಳಲು ಜನರು ಕಾತುರರಾಗಿದ್ದಾರೆಂದು ಟ್ರಂಪ್ ನಂಬಿದ್ದಾರೆ. ತಾವು ತಮ್ಮ ಈ ಭಾಷಣಕ್ಕಾಗಿ ನಡೆಸುತ್ತಿರುವ ತಯಾರಿಯನ್ನು ಟ್ರಂಪ್ ಅವರು ಟ್ವೀಟ್ ಮುಖಾಂತರ ತಿಳಿಸಲು ಯತ್ನಿಸಿರುವುದೇ ಇದೀಗ ಅವರು ನಗೆಪಾಟಲಿಗೀಡಾಗಲು ಕಾರಣವಾಗಿದೆ.

ಜನರೇನು ನೀವು ನಿಮ್ಮ ಉದ್ಘಾಟನಾ ಭಾಷಣವನ್ನು ಹೇಗೆ ಬರೆಯುತ್ತಿದ್ದೀರೆಂದು ಅವರನ್ನು ಕೇಳಿಲ್ಲವಾದರೂ, ಕೈಯಲ್ಲೊಂದು ನೋಟ್ ಪ್ಯಾಡ್ ಹಾಗೂ ಪೆನ್ನು ಹಿಡಿದು ಕ್ಯಾಮರಾಗೆ ಪೋಸ್ ಮಾಡಿದ ಫೋಟೋವನ್ನು ಟ್ರಂಪ್ ಇತ್ತೀಚೆಗೆ ಟ್ವೀಟ್ ಮಾಡಿಯೇ ಬಿಟ್ಟಿದ್ದರು.

‘‘ನನ್ನ ಉದ್ಘಾಟನಾ ಭಾಷಣವನ್ನು ವಿಂಟರ್ ವೈಟ್ ಹೌಸ್, ಮರ-ಅ-ಲಗೊ ಇಲ್ಲಿ ಮೂರು ವಾರಗಳ ಹಿಂದೆ ಬರೆಯುತ್ತಿದ್ದೆ. ಶುಕ್ರವಾರಕ್ಕಾಗಿ ಎದುರು ನೋಡುತ್ತಿದ್ದೇನೆ’’ ಎಂದು ಟ್ರಂಪ್ ಟ್ವೀಟ್ ಮಾಡಿದ್ದರು.

ಈ ಟ್ವೀಟ್ ವೈರಲ್ ಆಗಿದ್ದೇ ತಡ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅದಕ್ಕೆ ಹಾಸ್ಯಭರಿತ ಪ್ರತಿಕ್ರಿಯೆ ನೀಡಿದ್ದಾರೆ. ಟ್ರಂಪ್ ಅವರು ನೋಟ್ ಪ್ಯಾಡ್ ನಲ್ಲಿ ಏನು ಬರೆಯುತ್ತಿದ್ದರಬಹುದು ಎಂದು ತಾವೇ ಊಹಿಸಿಕೊಂಡು ಹಲವರು ಟ್ರಂಪ್ ಅವರನ್ನು ತಮಾಷೆ ಮಾಡಿದ್ದಾರೆ. ಒಬ್ಬರಂತೂ ಟ್ರಂಪ್ ಅವರು ಖಾಲಿ ನೋಟ್ ಪ್ಯಾಡ್ ಕೈಯಲ್ಲಿ ಹಿಡಿದಿದ್ದಾರೆ ಹಾಗೂ ಅವರ ಕೈಯಲ್ಲಿನ ಪೆನ್ನು ಕೂಡ ಮುಚ್ಚಿದೆ ಎಂದಿದ್ದಾರೆ.
ಅಂತಹ ಕೆಲವು ತಮಾಷೆಯ ಟ್ವೀಟುಗಳು ಇಲ್ಲಿವೆ ಓದಿ :

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News