ಆತೂರು: ‘ಬ್ಯಾರಿ ಕಮ್ಮನೆರೊ ಸಂದೋಲ’

Update: 2017-01-19 08:47 GMT

ಉಪ್ಪಿನಂಗಡಿ, ಜ.19: ಆತೂರಿನ ವಿದ್ಯಾಭಾರತಿ ಚಾರಿಟೇಬಲ್ ಟ್ರಸ್ಟ್ ಹಾಗೂ ಅಪ್ಟಿಮಸ್ ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ವತಿಯಿಂದ ಆತೂರಿನ ವಿದ್ಯಾಭಾರತಿ ವಿದ್ಯಾಕೇಂದ್ರದಲ್ಲಿ ‘ಬ್ಯಾರಿ ಕಮ್ಮನೆರೊ ಸಂದೋಲ’ ಕಾರ್ಯಕ್ರಮ ನಡೆಯಿತು.

ಅಲ್‌ಹಾದಿ ಅಸ್ಸೈಯದ್ ಇಬ್ರಾಹೀಂ ಅಲ್ ಖಾಸಿಮಿ ತಂಙಳ್ ಆತೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕ್ರಿಯೇಟಿವ್ ಫೌಂಡೇಶನ್ ಮಂಗಳೂರು ಇದರ ಅಧ್ಯಕ್ಷ ಅನ್ವರ್ ಸಾದಾತ್ ಮುಖ್ಯಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ಟಿಆರ್‌ಎಫ್ ಗೌರವ ಸಲಹೆಗಾರ ಹಾಜಿ ರಫೀಕ್ ಮಾಸ್ಟರ್, ಅಪ್ಟಿಮಸ್ ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ಮುಹಮ್ಮದ್ ಹುಸೈನ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಆದಂ ಕೊಯ್ಲ, ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಆತೂರು, ಅಬ್ದುಲ್ಲಾ ಹಾಜಿ ಕುಂಡಾಜೆ, ಬಿ.ಕೆ.ಮುಹಮ್ಮದ್ ಹಾಜಿ ಕುಂಡಾಜೆ, ಉದ್ಯಮಿಗಳಾದ ಹಾಜಿ ಕೆ.ಎಸ್.ಮುಸ್ತಫಾ, ಹಾಜಿ ಕೆ.ಎಸ್.ಮುಹಮ್ಮದ್ ಫೈರೋಝ್, ಬಿಜೆಎಂ ಅತೂರಿನ ಅಧ್ಯಕ್ಷ ಅಬ್ದುರ್ರಝಾಕ್, ಎಂಜೆಎಂ ಆತೂರು ಅಧ್ಯಕ್ಷ ಅಯೂಬ್ ಹಾಜಿ, ಆತೂರು ಬದ್ರಿಯಾ ಶಾಲಾ ಸಂಚಾಲಕ ಆದಂ ಪಿ., ರಾಮಕುಂಜ ಗ್ರಾಪಂ ಸದಸ್ಯ ಅಬ್ದುರ್ರಹ್ಮಾನ್ ಭಾಗವಹಿಸಿದ್ದರು.

ಸನ್ಮಾನ: ಈ ಸಂದರ್ಭ ನಿವೃತ ಪ್ರಾಂಶುಪಾಲ ವಿಠಲ ರೈ, ಉಪನ್ಯಾಸಕ ಡಾ.ಮುಸ್ತಫಾ ಮಾಸ್ಟರ್ ಗೋಳಿತ್ತಡಿ, ಬದ್ರಿಯಾ ಶಾಲೆ ಆತೂರಿನ ಪ್ರಾಂಶುಪಾಲ ಆನಂದ ಎಸ್.ಟಿ., ಹಿರಿಯ ಪತ್ರಕರ್ತ ಪುಷ್ಪರಾಜ್, ನಝೀರ್ ಕೊಯ್ಲ, ಕಡಬ ಏಮ್ಸ್ ಪ್ರಥಮ ದರ್ಜೆ ಕಾಲೇಜಿನ ಸಂಸ್ಥಾಪಕರಾದ ಸಮೀರಾ, ಫೌಝಿಯ, ಸಿಆರ್‌ಪಿಎಫ್ ಯೋಧ ಝುಬೈರ್ ನೇರೆಂಕಿಯವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ಕವಿಗೋಷ್ಠಿ: ಬ್ಯಾರಿ ಕವಿ ಮುಹಮ್ಮದ್ ಬಡ್ಡೂರು ಅಧ್ಯಕ್ಷತೆಯಲ್ಲಿ ಬ್ಯಾರಿ ಕವಿಗೋಷ್ಠಿ ನಡೆಯಿತು. ಕವಿಗಳಾದ ಬಶೀರ್ ಕಿನ್ಯ, ಜಿ.ಎಂ.ಮುಸ್ತಫಾ ಉಪ್ಪಿನಂಗಡಿ, ಅಶ್ರಫ್‌ಗೂಡಿನಬಳಿ, ಆದಂ ಹೆಂತಾರು ಮತ್ತಿತರರು ಬ್ಯಾರಿ ಕವನ, ಚುಟುಕುಗಳನ್ನು ವಾಚಿಸಿದರು.

ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಹಲೀಮಾ ಸುಮಾ ಎಂಬವರು ಸ್ಯಾಂಡ್ ಆರ್ಟ್ಸ್ ಕಲೆಯನ್ನು ಪ್ರದರ್ಶಿಸಿದರು.

ದಫ್ ಪ್ರದರ್ಶನ, ತೌಹೀದ್ ಸ್ಕೂಲಿನ ಮಕ್ಕಳಿಂದ ಕುಂಗ್‌ಪೂ, ಮಾರ್ಷಲ್ ಆರ್ಟ್ಸ್ ಪ್ರದರ್ಶನ, ವಿದ್ಯಾರ್ಥಿಗಳಿಂದ ಧೂಮಪಾನ ಕೊಲ್ಲುತ್ತದೆ ಎಂಬ ಪ್ರಹಸನ ನಡೆಸಲಾಯಿತು.

ಕಾರ್ಯಕ್ರಮವನ್ನು ವಿದ್ಯಾಭಾರತಿ ವಿದ್ಯಾಕೇಂದ್ರದ ಪ್ರಾಂಶುಪಾಲೆ ಆಯಿಶತ್ ಮಿಸ್ರಿಯ ಸ್ವಾಗತಿಸಿದರು. ಕಾರ್ಯದರ್ಶಿ ಸ್ವದಕತ್ ಜಿ.ಎಂ. ವಂದಿಸಿದರು. ಸದಸ್ಯ ನೌಫಲ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News