ಮಾಜಿ ಸಚಿವ ಸೋಮಣ್ಣ ಪಕ್ಷ ಸೇರ್ಪಡೆ ವದಂತಿ: ಸಿದ್ದರಾಮಯ್ಯ
Update: 2017-01-19 18:20 IST
ಮಂಗಳೂರು,ಜ.19: ಮಾಜಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಪಕ್ಷ ಸೇರ್ಪಡೆ ಎಂಬುದು ಬರೀ ವದಂತಿಯಷ್ಟೆ. ಅಂತಹ ಯಾವುದೇ ಮಾತುಕತೆ ನಮ್ಮ ಮಧ್ಯೆ ನಡೆದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗುರುವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಎತ್ತಿನಹೊಳೆ ವಿಚಾರಕ್ಕೆ ಸಂಬಂಧಿಸಿ ಬಿಜೆಪಿಯವರು ದ್ವಂದ ನೀತಿ ಅನುಸರಿಸುತ್ತಿದ್ದಾರೆ. ಬಿಜೆಪಿ ಮುಖಂಡರು ದ.ಕ.ಜಿಲ್ಲೆಯಲ್ಲೊಂದು ಮಾತುಗಳನ್ನಾಡಿದರೆ, ಹೊರಜಿಲ್ಲೆಗಳಲ್ಲಿ ಬೇರೆಯೇ ಮಾತುಗಳನ್ನಾಡುತ್ತಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇದನ್ನು ರಾಜಕೀಯಕ್ಕೆ ಬಳಸುವ ಬದಲು ಕೇಂದ್ರದಿಂದ ಬರಪರಿಹಾರದ ಹೆಚ್ಚಿನ ಮೊತ್ತವನ್ನು ತರಲು ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದರು.