×
Ad

ಈಜು ಸ್ಪರ್ಧೆ: ಮಂಗಳಾ ಈಜು ಕ್ಲಬ್‌ಗೆ 135 ಪದಕಗಳು

Update: 2017-01-19 19:25 IST

 ಮಂಗಳೂರು, ಜ.19: ಕರಾವಳಿ ಉತ್ಸವ ಈಜು ಸ್ಪರ್ಧೆ ಹಾಗೂ ಎನ್‌ಐಟಿಕೆ ಈಜು ಸ್ಪರ್ಧೆಯಲ್ಲಿ ಮಂಗಳಾ ಈಜು ಕ್ಲಬ್ಬಿನ ಸದಸ್ಯರು 135 ಪದಕಗಳನ್ನು ಪಡೆದುಕೊಂಡಿದ್ದಾರೆ.

ನಗರದ ಮಂಗಳಾ ಈಜು ಕೊಳದಲ್ಲಿ ನಡೆದ ಕರಾವಳಿ ಉತ್ಸವ ಈಜು ಸ್ಪರ್ಧೆಯಲ್ಲಿ ಮಂಗಳಾ ಈಜು ಕ್ಲಬ್‌ನ ಸದಸ್ಯರು 23 ಚಿನ್ನ, 20 ಬೆಳ್ಳಿ 20 ಕಂಚು ಗಳಿಸಿದ್ದಾರೆ.

ಸುರತ್ಕಲ್‌ನ ಎನ್‌ಐಟಿಕೆ ಈಜು ಕೊಳದಲ್ಲಿ ಎನ್‌ಐಟಿಕೆ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ನಡೆದ ಈಜು ಸ್ಪರ್ಧೆಯಲ್ಲಿ ಮಂಗಳಾ ಈಜು ಕ್ಲಬ್ಬಿನ ಸದಸ್ಯರು 22 ಚಿನ್ನ, 33 ಬೆಳ್ಳಿ 17 ಕಂಚು ಗಳಿಸಿದ್ದಾರೆ.

ಈ ಸಂದರ್ಭ ಮಂಗಳಾ ಈಜು ಕ್ಲಬ್‌ನ ಅಧ್ಯಕ್ಷ ಪ್ರಮುಖ್ ರೈ, ಉಪಾಧ್ಯಕ್ಷ ರೂಪಾ ಜಿ. ಪ್ರಭು, ಖಜಾಂಚಿ ಧನಂಜಯ ಶೆಟ್ಟಿ ಜತೆಗೆ ಪದಕ ಗಳಿಸಿದ ಕ್ಲಬ್ಬಿನ ಈಜು ತಂಡದ ಸದಸ್ಯರಾದ ವಿಯೋನ್ ಡಿಸೋಜ, ಪ್ರಕೃತಿ ರೈ, ಗ್ರಹಿತ್ ಜಿ. ಪ್ರಭು, ಚಿಂತನ್ ಎಸ್. ಶೆಟ್ಟಿ, ನೈತಿಕ್ ಎನ್., ರಿಷಾ ಪಿ. ಶೆಟ್ಟಿ, ಪ್ರೀತಮ್ ರಾಜ್ ಡಿಸೋಜ, ಸ್ಟೀವ್ ಜೆಫ್ ಲೋಬೊ, ಪ್ರೇಮ್ ರಾಜ್ ಡಿಸೋಜ, ಶಮಂತ್ ಬಿ.ಪಿ., ಮಿಥುಲ್ ಶೆಟ್ಟಿ, ಪ್ರೇರಣಾ ಎ. ಕುಂದರ್, ಹನಿ ಪದ್ಮಶಾಲಿ, ಆರ್ಯ ಬಾಳಿಗ, ಎಸ್.ಆರ್. ರಚನಾ ರಾವ್, ನಮೃತಾ ಶೆಟ್ಟಿ, ಗ್ರೀಷ್ಮಾ ಶೆಟ್ಟಿ ಎಂ. ತೇಜಸ್ ರಾವ್, ಶಿಶಿರ ಎಸ್. ಗಟ್ಟಿ, ರಿಷಾ ಶೆಣೈ, ಡಿಯೋನಾ ಟಿಯಾ ಮಿನೆಜಸ್, ಕೀರ್ತನಾ ಎಂ., ಮಾನಸಾ, ರಿಶೆಲ್ ಸಲ್ದಾನ್ಹಾ, ಗಗನ್ ಜಿ. ಪ್ರಭು, ಪ್ರಥಮ್ ಎ. ಕುಂದರ್ ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News