×
Ad

ಕೇರಳ ಮುಖ್ಯಮಂತ್ರಿ ವಿರುದ್ಧ ಮಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ

Update: 2017-01-19 19:52 IST

ಮಂಗಳೂರು , ಜ.19 : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್  ವಿರುದ್ದ  ಬಿಜೆಪಿ  ಕಾರ್ಯಕರ್ತರು ಏಕಾಏಕಿ  ಪ್ರತಿಭಟನೆ ನಡೆಸಿದ ಘಟನೆ  ಕಂಕನಾಡಿ (ಪಡೀಲ್) ರೈಲ್ವೆ ನಿಲ್ದಾಣದಲ್ಲಿ  ನಡೆಯಿತು .

ತಿರುವನಂತಪುರಂ ಗೆ ತೆರಳಲು ಮಂಗಳೂರಿಗೆ ಆಗಮಿಸಿದ ಕೇರಳ ಸಿ ಎಂ ವಿರುದ್ಧ ರೈಲ್ವೆ ನಿಲ್ದಾಣ ದ ಹೊರಗೆ ಕಪ್ಪುಬಾವುಟ ಪ್ರದರ್ಶನ ಮಾಡುವ ಮೂಲಕ ಕೇರಳದಲ್ಲಿ ನಡೆಯುತ್ತಿರುವ  ಬಿಜೆಪಿ ಕಾರ್ಯಕರ್ತ ರ ಹತ್ಯೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

  ಪ್ರತಿಭಟನಾಕಾರರನ್ನು ಪೊಲೀಸರು  ಬಂಧಿಸಿದ ನಂತರ ಪಿಣರಾಯಿ ವಿಜಯನ್ ಅಲ್ಲಿಂದ ತೆರಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News