×
Ad

ಇರಾನ್: ಬೆಂಕಿ ಬಿದ್ದ ಕಟ್ಟಡ ಕುಸಿದು 30 ಅಗ್ನಿಶಾಮಕರ ಸಾವು

Update: 2017-01-19 20:30 IST

ಟೆಹರಾನ್ (ಇರಾನ್), ಜ. 19: ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ಗುರುವಾರ ಬೆಂಕಿಯಿಂದ ಆವರಿಸಲ್ಪಟ್ಟಿದ್ದ ಗಗನಚುಂಬಿ ಕಟ್ಟಡವೊಂದು ಕುಸಿದು ಬಿದ್ದಿದ್ದು, ಕನಿಷ್ಠ 30 ಅಗ್ನಿಶಾಮಕ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಹಾಗು ಸುಮಾರು 75 ಮಂದಿ ಗಾಯಗೊಂಡಿದ್ದಾರೆ ಎಂದು ಸರಕಾರಿ ಮಾಧ್ಯಮ ವರದಿ ಮಾಡಿದೆ.

ರಾಜಧಾನಿಯ ಕೇಂದ್ರ ಸ್ಥಾನದಲ್ಲಿರುವ ಪ್ಲಾಸ್ಕೊ ಕಟ್ಟಡದಲ್ಲಿ ದುರಂತ ಸಂಭವಿಸಿದೆ.ಇರಾನ್‌ನ ಸರಕಾರಿ ಒಡೆತನದ ‘ಪ್ರೆಸ್ ಟಿವಿ’ ಅಗ್ನಿಶಾಮಕರ ಸಾವುಗಳ ಬಗ್ಗೆ ವರದಿ ಮಾಡಿದೆ.ದುರಂತದಲ್ಲಿ 30 ನಾಗರಿಕರು ಗಾಯಗೊಂಡಿದ್ದಾರೆ ಎಂದು ಅದು ಹೇಳಿದೆ.45 ಅಗ್ನಿಶಾಮಕರು ಗಾಯಗೊಂಡಿದ್ದಾರೆ ಎಂದು ಸರಕಾರಿ ಸುದ್ದಿ ಸಂಸ್ಥೆ ‘ಇರ್ನ’ ವರದಿ ಮಾಡಿದೆ.

ಕಟ್ಟಡ ಕುಸಿಯು ಮೊದಲು ಅಗ್ನಿಶಾಮಕರು ಹಲವು ಗಂಟೆಗಳ ಕಾಲ ಬೆಂಕಿ ನಂದಿಸಲು ಶ್ರಮಿಸಿದ್ದರು. ಕಟ್ಟಡವು ಕೆಲವೇ ಸೆಕೆಂಡ್‌ಗಳಲ್ಲಿ ಧರಾಶಾಯಿಯಾಯಿತು. ಇದನ್ನು ಸರಕಾರಿ ಟೆಲಿವಿಶನ್ ನೇರಪ್ರಸಾರದಲ್ಲಿ ತೋರಿಸಿತು. ಕಟ್ಟಡ ಕುಸಿದ ಬಳಿಕ ದಟ್ಡ ಕಂದು ಹೊಗೆ ಮೇಲೆದ್ದಿತು.
ಬೆಳಗ್ಗೆ ಸುಮಾರು 8 ಗಂಟೆ ವೇಳೆಗೆ ಆರಂಭವಾದ ಬೆಂಕಿಯನ್ನು ನಂದಿಸಲು 10 ಅಗ್ನಿಶಾಮಕ ವಾಹನಗಳು ಶ್ರಮಿಸಿದವು.17 ಅಂತಸ್ತಿನ ಕಟ್ಟಡವನ್ನು 1969ರ ದಶಕದಲ್ಲಿ ನಿರ್ಮಿಸಲಾಗಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News