×
Ad

ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ದನ ದೇವರಿಗೆ ಬ್ರಹ್ಮಕಲಶೋತ್ಸವ

Update: 2017-01-19 21:34 IST

ಮುಲ್ಕಿ ,  ಜ.19: ಕಿನ್ನಿಗೋಳಿ ಸಮೀಪದ ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ದನ ಮಹಾಗಣಪತಿ ದೇವಳದಲ್ಲಿ ಶಿಬರೂರು ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳ ಪ್ರಧಾನ ಪೌರೋಹಿತ್ಯದಲ್ಲಿ ಕೃಷ್ಣರಾಜ ತಂತ್ರಿಗಳ ಉಪಸ್ಥಿತಿಯಲ್ಲಿ ಗುರುವಾರ ಅಷ್ಠಬಂಧ ಬ್ರಹ್ಮಕಲಶೋತ್ಸವ ನಡೆಯಿತು.

  ಈ ಸಂದರ್ಭ ದೇವಳದ ಅನುವಂಶಿಕ ಅರ್ಚಕ ವೈ. ಗಣೇಶ್ ಭಟ್, ಸದಾನಂದ ಭಟ್, ವರುಣ್ ಭಟ್, ನಾಗಲಕ್ಷ್ಮೀ ಭಟ್, ದೇವಳದ ಆಡಳಿತ ಮೊಕ್ತೇಸರ ಏಳಿಂಜೆ ಕೋಂಜಾಲು ಗುತ್ತು ಪ್ರಭಾಕರ ಶೆಟ್ಟಿ, ಶ್ಯಾಮಲಾ ಪ್ರಭಾಕರ ಶೆಟ್ಟಿ, ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಏಳಿಂಜೆ ಜಾರಂದಾಯ ದೈವಸ್ಥಾನ ಆಡಳಿತ ಮೊಕ್ತೇಸರ ಸದಾನಂದ ಶೆಟ್ಟಿ ಭಂಡಸಾಲೆ, ಪಟ್ಟೆ ಜಾರಂದಾಯ ದೈವಸ್ಥಾನ ಆಡಳಿತ ಮೊಕ್ತೇಸರ ರಘುರಾಮ ಅಡ್ಯಂತಾಯ, ದಿವಾಕರ ಶೆಟ್ಟಿ ಕೊಂಜಾಲು ಗುತ್ತು, ಅನಿಲ್ ಶೆಟ್ಟಿ ಕೊಂಜಾಲು ಗುತ್ತು, ಶಿಬರೂರು ಗುತ್ತು ಗುತ್ತಿನಾರ್ ಉಮೇಶ್ ಶೆಟ್ಟಿ, ಶಿಬರೂರು ಗುತ್ತು ಕಿಟ್ಟಣ್ಣ ಶೆಟ್ಟಿ, ವಿರಾರ್ ಶಂಕರ ಶೆಟ್ಟಿ, ವೈ. ಕೃಷ್ಣ ಸಾಲ್ಯಾನ್, ವೈ. ಯೋಗೀಶ್ ರಾವ್, ವತ್ಸಲಾ ರಾವ್, ಧರ್ಮದರ್ಶೀ ಹರಿಕೃಷ್ಣ ಪುನರೂರು, ಯುಗಪುರುಷ ಪ್ರಧಾನ ಸಂಪಾದಕ ಕೆ. ಭವನಾಭಿರಾಮ ಉಡುಪ, ಸಾಯಿನಾಥ್ ಶೆಟ್ಟಿ, ಸ್ವರಾಜ್ ಶೆಟ್ಟಿ, ತಾ.ಪಂಚಾಯತ್ ಸದಸ್ಯರಾದ ದಿವಾಕರ ಚೌಟ, ಪದ್ಮಿನಿ ವಸಂತ್, ಭಾಸ್ಕರ ಶೆಟ್ಟಿ, ಕೊಂಜಾಲು ಗುತ್ತು ಕುಟುಂಬಸ್ಥರು ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News