ಅನಧಿಕೃತ ವಾಸ: ನೈಜೀರಿಯಾ ಪ್ರಜೆ ಗಡೀಪಾರು
ಉಡುಪಿ, ಜ.19: ಅನಧಿಕೃತವಾಗಿ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ್ದ ನೈಜೀರಿಯಾ ಪ್ರಜೆ ಉನದಿಕೆ ಆಗಸ್ಟಿನ್ ಜೂನಿಯರ್ ಎಂಬಾತನನ್ನು ಭಾರತದಿಂದ ಗಡೀಪಾರು ಮಾಡಲಾಗಿದೆ.
ಅನಂತರ ವೀಸಾ ಅವಧಿಯನ್ನು ವಿದೇಶಿಯರ ನೊಂದಣಾಧಿಕಾರಿಗಳ ಕಚೇರಿಯಲ್ಲಿ ನೊಂದಾಯಿಸದೇ ಮತ್ತು ವಾಸ ವಿಸ್ತರಣೆಗಾಗಿ ಅರ್ಜಿ ಸಲ್ಲಿಸದೇ ಅನಧಿಕೃತವಾಗಿ ವಾಸ್ತವ್ಯವಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಅನಂತರ ವೀಸಾ ಅವಧಿಯನ್ನು ವಿದೇಶಿಯರ ನೊಂದಣಾಧಿಕಾರಿಗಳ ಕಚೇರಿಯಲ್ಲಿ ನೊಂದಾಯಿಸದೇ ಮತ್ತು ವಾಸ ವಿಸ್ತರಣೆಗಾಗಿ ಅರ್ಜಿ ಸಲ್ಲಿಸದೇ ಅನಧಿಕೃತವಾಗಿ ವಾಸ್ತವ್ಯವಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು.
2016ರ ಜು.19ರಂದು ಮಣಿಪಾಲ ಪೊಲೀಸರು ಆತನನ್ನು ಬಂಧಿಸಿ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜು.20ರಿಂದ ಆ.4ರವರೆಗೆ ಶಿಕ್ಷೆ ಮತುತಿ ದಂಡ ವಿಧಿಸಲಾಗಿತ್ತು. ಹೊಸದಿಲ್ಲಿಯಲ್ಲಿರುವ ನೈಜೀರಿಯಾ ಹೈಕಮಿಷನ್ ಈತನಿಗೆ ತಾತ್ಕಾಲಿಕ ರಹದಾರಿ ಪತ್ರ ನೀಡಿದ್ದು, ಅದರಂತೆ ಜ. 10ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೇಶದಿಂದ ಗಡೀಪಾರು ಮಾಡಲಾಯಿತು.
2016ರ ಜು.19ರಂದು ಮಣಿಪಾಲ ಪೊಲೀಸರು ಆತನನ್ನು ಬಂಧಿಸಿ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜು.20ರಿಂದ ಆ.4ರವರೆಗೆ ಶಿಕ್ಷೆ ಮತ್ತು ದಂಡ ವಿಧಿಸಲಾಗಿತ್ತು. ಹೊಸದಿಲ್ಲಿಯಲ್ಲಿರುವ ನೈಜೀರಿಯಾ ಹೈಕಮಿಷನ್ ಈತನಿಗೆ ತಾತ್ಕಾಲಿಕ ರಹದಾರಿ ಪತ್ರ ನೀಡಿದ್ದು, ಅದರಂತೆ ಜ. 10ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೇಶದಿಂದ ಗಡೀಪಾರು ಮಾಡಲಾಯಿತು. ಉಡುಪಿ ಜಿಲ್ಲಾ ವಿಶೇಷ ವಿಭಾಗದ ಸಿಬಂದಿ ಅಮರ್ ಕುಮಾರ್ ಅವರು ವಿದೇಶಿಗನನ್ನು ವಿಮಾನ ನಿಲ್ದಾಣದ ಇಮಿಗ್ರೇಶನ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದರು.