ಜನವರಿ 22ರಂದು ಸರಳಿಕಟ್ಟೆಯಲ್ಲಿ ರಾತೀಬು ನೇರ್ಚೆ
Update: 2017-01-20 14:23 IST
ಉಪ್ಪಿನಂಗಡಿ, ಜ.20: ಇಲ್ಲಿಗೆ ಸಮೀಪದ ಸರಳಿಕಟ್ಟೆ ಬದ್ರಿಯಾ ಜುಮಾ ಮಸೀದಿಯಲ್ಲಿ ಮುಹಿಯುದ್ದೀನ್ ಶೈಖ್ (ಖ.ಸಿ) ಅವರ ಹೆಸರಿನಲ್ಲಿ ಪ್ರತಿ ವರ್ಷ ಆಚರಿಸಿಕೊಂಡು ಬರುವ ರಾತೀಬು ನೇರ್ಚೆಯು ಜ.22 ರಂದು ಭಾನುವಾರ ನಡೆಯಲಿದೆ. ಸಯ್ಯಿದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ (ಖಲೀಫಾ) ರಾತೀಬ್ ನೇತೃತ್ವ ವಹಿಸಲಿದ್ದಾರೆ ಎಂದು ಸಯ್ಯಿದ್ ಇಬ್ರಾಹಿಂ ಹಂಝ ತಂಙಳ್ (ಹಾದಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.