×
Ad

ನಿಮ್ಮ ಉದ್ಯೋಗವನ್ನು ಯಾರೂ ಕಸಿದುಕೊಳ್ಳುತ್ತಿಲ್ಲ, ನೀವೇ ಯುದ್ಧಕ್ಕೆ ವಿಪರೀತ ಖರ್ಚು ಮಾಡುತ್ತಿದ್ದೀರಿ !

Update: 2017-01-20 14:53 IST

ಬೀಜಿಂಗ್, ಜ.20: ಚೀನೀ ಬಿಲಿಯಾಧಿಪತಿ ಹಾಗೂ ಅಲಿಬಾಬಾ ಸ್ಥಾಪಕ ಜಾಕ್ ಮಾ ಪ್ರಕಾರ ಅಮೆರಿಕಾದ ಉದ್ಯೋಗಗಳನ್ನು ಬೇರೆ ಯಾವುದೇ ದೇಶ ಅಥವಾ ಜಾಗತೀಕರಣವು ಕಸಿಯುತ್ತಿಲ್ಲ. ಬದಲಾಗಿ ದೇಶದ ವಿಪರೀತ ಮಿಲಿಟರಿ ಖರ್ಚು ವೆಚ್ಚಗಳೇ ಅದರ ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ.

ಮೆಕ್ಸಿಕೋ, ಚೀನಾ ಮುಂತಾದ ದೇಶಗಳಿಗೆ ಹೊರಗುತ್ತಿಗೆ ನೀಡುತ್ತಿರುವುದರಿಂದ ಅಮೆರಿಕಾದ ಹಲವು ಉದ್ಯೋಗಗಳು ಕಡಿತಗೊಳ್ಳುತ್ತಿವೆ ಎಂದು ಆಗಾಗ ದೂರುತ್ತಿರುವ ಅಮೆರಿಕಾದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನುಇತ್ತೀಚೆಗೆ ಜಾಕ್ ಭೇಟಿಯಾಗಿದ್ದರೆನ್ನುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

‘‘ಇಲ್ಲಿಯ ತನಕ ಅಮೆರಿಕನ್ನರು 13 ಯುದ್ಧಗಳಿಗಾಗಿ 40.2 ಟ್ರಿಲ್ಲಿಯನ್ ಡಾಲರ್ ವೆಚ್ಚ ಮಾಡಿದ್ದಾರೆ. ಇದರ ಬದಲು ಅದರ ಒಂದು ಭಾಗದಷ್ಟು ಹಣವನ್ನು ಅವರು ಮೂಲಭೂತ ಸೌರ್ಕರ್ಯಾಭಿವೃದ್ಧಿಗಾಗಿ ಹಾಗೂ ಉದ್ಯೋಗ ಸೃಷ್ಟಿಗಾಗಿ ಉಪಯೋಗಿಸಿದ್ದರೆ ಏನಾಗುತ್ತಿತ್ತು ? ಏನೇ ಆಗಲಿ ನಿಮ್ಮ ಜನರಿಗಾಗಿಯೇ ನೀವು ಹಣ ಖರ್ಚು ಮಾಡಬೇಕು,’’ ಎಂದು ದಾವೋಸ್ ನ ವರ್ಲ್ಡ್ ಇಕನಾಮಿಕ್ ಫೋರಂ ನಲ್ಲಿ ಮಾತನಾಡುತ್ತಾ ಅವರು ಹೇಳಿದ್ದರು.

‘‘ನಾನು ಯುವಕನಾಗಿದ್ದಾಗ ಅಮೆರಿಕಾದ ಫೋರ್ಡ್, ಬೋಯಿಂಗ್ ಕಂಪೆನಿಗಳ ಬಗ್ಗೆಯೇ ಕೇಳುತ್ತಿದ್ದೆ. ಆದರೆ ಕಳೆದ ಹತ್ತಿಪ್ಪತ್ತು ವರ್ಷಗಳಿಂದೀಚೆಗೆ ಸಿಲಿಕಾನ್ ವ್ಯಾಲಿ ಮತ್ತು ವಾಲ್ ಸ್ಟ್ರೀಟ್ ಬಗ್ಗೆ ಮಾತ್ರ ಕೇಳುತ್ತಿದ್ದೇನೆ,’’ಎಂದಿದ್ದಾರೆ.

ಸ್ಟಾಕ್ ಹೋಮ್ ಇಂಟರ್ ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಪ್ರಕಾರ 2015ರಲ್ಲಿ ಅಮೆರಿಕಾ 596 ಬಿಲಿಯನ್ ಡಾಲರ್ ಅಥವಾ ತ ನ್ನ ಜಿಡಿಪಿಯ 3.3ಶೇ ಮೊತ್ತವನ್ನು ಮಿಲಿಟರಿಗಾಗಿ ಖರ್ಚು ಮಾಡಿದೆ. ಇದೇ ಅಮೆರಿಕಾದಲ್ಲಿನ ಉದ್ಯೋಗ ಕಡಿತಗಳಿಗೆ ಕಾರಣ ಎಂದು ಜಾಕ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News