×
Ad

ಎಸ್ಸೆಸೆಫ್ ಹೂಹಾಕುವಕಲ್ಲು ಶಾಖೆಯ 20ನೆ ವರ್ಷಾಚರಣೆಯ ಸಮಾರೋಪ

Update: 2017-01-20 15:26 IST

ಕೊಣಾಜೆ, ಜ.20: ಧಾರ್ಮಿಕ ಮತ್ತು ಲೌಕಿಕ ಗ್ರಂಥಗಳನ್ನು ಅಧ್ಯಯನ ಮಾಡುವ ಮೂಲಕ ಜ್ಞಾನವನ್ನು ವೃದ್ಧಿ ಮಾಡಿಕೊಳ್ಳಲು ಪ್ರಯತ್ನಿಸಬೇಕು. ದ್ಸಿಕ್ರ್, ಸ್ವಲಾತ್ ಮುಂತಾದ ಉತ್ತಮ ಕಾರ್ಯವನ್ನು ಮಾಡುವ ಮೂಲಕ ದೇಹದ ಅಂಗಾಗಳನ್ನು ಅಲ್ಲಾಹನಿಗೆ ಸಮರ್ಪಣೆ ಮಾಡಬೇಕು ಎಂದು ಶೈಖುನಾ ಆಲಿಕುಂಞಿ ಉಸ್ತಾದ್ ಶಿರಿಯಾ ಹೇಳಿದರು.

ಅವರು ಹೂಹಾಕುವಕಲ್ಲುವಿನಲ್ಲಿ ಎಸ್ಸೆಸೆಫ್ ಹೂಹಾಕುವಕಲ್ಲು ಶಾಖೆಯ 20ನೆ ವರ್ಷಾಚರಣೆಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಪುರಾತನ ಕಾಲದಲ್ಲಿ ಹಿರಯರು, ಗುರುಗಳು ಅನುಕರಣೆ ಮಾಡಿದ ಹಾದಿಯಲ್ಲಿ ನಾವು ಸಾಗಬೇಕು. ಅದು ಬಿಟ್ಟು ಸಿದ್ಧಾಂತಗಳಲ್ಲಲಿ ಗೊಂದಲ ಮಾಡಿ ದಾರಿ ತಪ್ಪಿಸುವ ಪ್ರಯತ್ನ ಬೇಡ ಎಂದರು.

ಅಲ್ ಮದೀನ ಅಧ್ಯಕ್ಷ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ತಂಙಳ್ ಕಿಲ್ಲೂರು ದುವಾ ನೆರವೇರಿಸಿದರು. ಡಾ. ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ ಮುಖ್ಯ ಭಾಷಣ ಮಾಡಿದರು. ಅಬ್ದುಲ್ ಖಾದಿರ್ ಮುಸ್ಲಿಯಾರ್ ನಂದನಡ್ಪು. ಜಿ.ಪಂ. ಮಾಜಿ ಸದಸ್ಯ ಸಂತೋಷ್ ಕುಮಾರ್ ಬೋಳಿಯಾರ್, ಎಸ್‌ವೈಎಸ್ ಮುಡಿಪು ಸೆಂಂಟರ್ ಅಧ್ಯಕ್ಷ ಎಸ್.ಕೆ. ಖಾದರ್ ಹಾಜಿ, ತಾ.ಪಂ. ಸದಸ್ಯ ಹೈದರ್ ಕೈರಂಗಳ, ಹೂಹಾಕುವಕಲ್ಲು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನವೀನ್, ಮುಡಿಪು ಸಂಯುಕ್ತ ಪ.ಪೂ ಕಾಲೇಜು ಉಪ ಪ್ರಾಂಶುಪಾಲ ಬಸವರಾಜ್ ಪಲ್ಲಕ್ಕಿ, ಹೂಹಾಕುವ ಕಲ್ಲು ಮಸೀದಿಯ ಖತೀಬ್ ರಫೀಕ್ ಅಹ್ಸನಿ ಮೊದಲಾದವರು ಉಪಸ್ಥಿತರಿದ್ದರು.

ಎಸ್ಸೆಸೆಫ್ ಹೂಹಾಕುವಕಲ್ಲು ಶಾಖೆಯ ಮಾಜಿ ಅಧ್ಯಕ್ಷ ಉಮರುಲ್ ಫಾರೂಕ್ ಸಅದಿ ಅತಿಥಿಗಳನ್ನು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News