×
Ad

ಮಂಜನಾಡಿ : ಸ್ವಲಾತ್ ವಾರ್ಷಿಕೋತ್ಸವ ಮತ್ತು ಜೀಲಾನಿ ಅನುಸ್ಮರಣಾ ಕಾರ್ಯಕ್ರಮ

Update: 2017-01-20 17:22 IST

ಕೊಣಾಜೆ, ಜ. 20 :   ಯುವ ಜನಾಂಗ ದಾರಿತಪ್ಪಿದರೆ ಮುಸ್ಲಿಂ ಜನಾಂಗ ಅವನತಿಯಾಗುತ್ತಿದೆ ಎಂದರ್ಥ ಎಂದು ಸಯ್ಯಿದ್ ಅಶ್ರಫ್ ಆಸ್ಸಖಾಫ್ ತಂಙಳ್ ಆದೂರು ಅಭಿಪ್ರಾಯಪಟ್ಟರು.

 ಅವರು ನೂರುಲ್ ಹುದಾ ಮಸ್ಜಿದ್ ತಖ್ವಾ ಮತ್ತು ಎಸ್ಸೆಸ್ಸೆಫ್ ಮಂಜನಾಡಿ ಕೊಲ್ಲರಕೋಡಿ ಶಾಖೆ ಇದರ ಜಂಟಿ ಆಶ್ರಯದಲ್ಲಿ ನಡೆದ 13ನೇ ಸ್ವಲಾತ್ ವಾರ್ಷಿಕೋತ್ಸವ ಮತ್ತು ಜೀಲಾನಿ ಅನುಸ್ಮರಣಾ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

ಯುವ ಜನಾಂಗ ನಮ್ಮ ದೊಡ್ಡ ಸಂಪತ್ತು. ಆ ಸಂಪತ್ತು ನಾಶವಾಗದಂತೆ ಕಾಪಾಡುವುದು ಪ್ರತಿ ಮುಸ್ಲಿಮರ ಕರ್ತವ್ಯ ಎಂದು ಹೇಳಿದರು.

ಅಲ್ ಮದೀನ ಮಂಜನಾಡಿಯ ಅಧ್ಯಕ್ಷ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಉದ್ಘಾಟಿಸಿದರು.

ತಖ್ವಾ ಮಸೀದಿ ಕೊಲ್ಲರಕೋಡಿ ಅಧ್ಯಕ್ಷ ಅಬ್ದುಲ್ ರಝಾಕ್ ಪಾರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಮೂಡಬಿದ್ರೆ ಮಹಿಸುನ್ನ ದರ್ಸ್ ಮುದರ್ರಿಸ್ ನೌಫಳ್ ಸಖಾಫಿ ಕಳಸ ಮುಖ್ಯ ಪ್ರಭಾಷಣಗೈದರು.

ಈ ಸಂದರ್ಭ ಕೆಎಂಜೆಸಿ ಮಂಜನಾಡಿ ವಲಯ ಪ್ರಧಾನ ಕಾರ್ಯದರ್ಶಿ ಅಲಿಕುಂಞ ಹಾಜಿ ಪಾರೆ, ಎಸ್‌ಎಂಎ ದ.ಕ ಅಧ್ಯಕ್ಷ ಕತಾರ್ ಬಾವ ಹಾಜಿ, ಎಸ್‌ವೈಎಸ್ ಮಂಜನಾಡಿ ಸೆಂಟರ್ ಅಧ್ಯಕ್ಷ ಮಹಮ್ಮದ್ ಹಾಜಿ ಕಂಡಿಕ, ನರಿಂಗಾನ ಗ್ರಾ.ಪಂ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ನರಿಂಗಾನ ಗ್ರಾ.ಪಂ ಮಾಜಿ ಅಧ್ಯಕ್ಷ ಎಂ.ಪಿ ಮಹಮ್ಮದ್ ಪಾರೆ, ಎಸ್‌ವೈಎಸ್ ಕೊಲ್ಲರಕೋಡಿ ಶಾಖಾಧ್ಯಕ್ಷ ಎನ್.ಎಂ ಅಬ್ದುರ್ರಹ್ಮಾನ್ ಹಾಜಿ, ಕೊಲ್ಲರಕೋಡಿ ತಖ್ವಾ ಮಸೀದಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ತಟ್ಲ, ಉಪಾಧ್ಯಕ್ಷರಾದ ಮೂಸ ಹಾಜಿ, ಅಬ್ದುಲ್ ಖಾದರ್ ಕುಂಞ, ಕೋಶಾಧಿಕಾರಿ ಇಬ್ರಾಹೀಂ ಹಾಜಿ ಪಾರೆ, ಅಲ್-ಮದೀನ ಮಂಜನಾಡಿ ಮುದರ್ರಿಸ್ ಕುಂಞ ಅಂಜದಿ, ಇಬ್ರಾಹೀಂ ಅಹ್ಸನಿ ಮಂಜನಾಡಿ ಉಪಸ್ಥಿತರಿದರು.

ನೂರುಲ್ ಉಲೂಂ ಮದ್ರಸ ಮುಅಲ್ಲಿಂ ಇಸ್ಮಾಯಿಲ್ ಮುಸ್ಲಿಯಾರ್ ಸ್ವಾಗತಿಸಿದರು . ಎಸ್ಸೆಸ್ಸೆಫ್ ಕೊಲ್ಲರಕೋಡಿ ಅಧ್ಯಕ್ಷ ಸಾಬಿತ್ ಪಾರೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News