×
Ad

ಜ. 22ರಂದು ಉಳ್ಳಾಲದಲ್ಲಿ ಸಲಫಿ ಸಮಾವೇಶ

Update: 2017-01-20 17:29 IST

ಮಂಗಳೂರು, ಜ.20 : ಸೌತ್ ಕರ್ನಾಟಕ ಸಲಫಿ ಮೂವ್‍ಮೆಂಟ್‍ ಹಮ್ಮಿಕೊಂಡಿರುವ ಕುರ್‍ಆನ್ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ಎಸ್.ಕೆ.ಎಸ್.ಎಮ್.ನ ಉಳ್ಳಾಲ ಘಟಕದ ವತಿಯಿಂದ ಜ. 22 ರಂದು ಆದಿತ್ಯವಾರ ಸಂಜೆ ಗಂಟೆ 4:30ಕ್ಕೆ ಉಳ್ಳಾಲ ಪಂಚಾಯತ್ ಗ್ರೌಂಡ್‍ನಲ್ಲಿ ಸಲಫಿ ಸಮಾವೇಶವು ಜರಗಲಿದೆ.

ಮೌಲವಿ ಅಲಿ ಉಮರ್‍ರವರು “ಕುರ್‍ಆನ್ ಮತ್ತು ಸುನ್ನತ್‍ಗೆ ಮರಳಿರಿ” ಎಂಬ ವಿಷಯವಾಗಿ ಮತ್ತು ಹಿರಿಯ ವಿದ್ವಾಂಸ ಚುಯೈಲಿ ಅಬ್ದುಲ್ಲಾ ಮುಸ್ಲಿಯಾರ್‍ರವರು “ಕಲಿಮತುಶ್ಶಹಾದ” ಎಂಬ ವಿಷಯವಾಗಿ ಉಪನ್ಯಾಸ ನೀಡಲಿದ್ದಾರೆಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News