×
Ad

ಕಿನ್ಯಾ-ಬೆಳರಿಂಗೆ ಕಾಂಕ್ರೀಟ್ ರಸ್ತೆ ಉದ್ಘಾಟನೆ

Update: 2017-01-20 17:43 IST

ಕೊಣಾಜೆ,  ಜ.20 : ಕಿನ್ಯ ಗ್ರಾಮದ ಬೆಳರಿಂಗೆಯಿಂದ ಉಕ್ಕುಡ ಸಂಪರ್ಕಿಸುವ  ಪಂಚಾಯತ್ ವಾರ್ಡ್ ಅನುದಾನದ ಸುಮಾರು 4ಲಕ್ಷದಲ್ಲಿ ನಿರ್ಮಾಣಗೊಂಡ ಹೊಸ ಕಾಂಕ್ರೀಟ್ ರಸ್ತೆಯನ್ನು  ಕಿನ್ಯ ಜಮಾಅತ್ ಅಧ್ಯಕ್ಷರಾದ ಹಾಜಿ ಹುಸೈನ್ ಕುಂಞಯವರ ನೇತೃತ್ವದಲ್ಲಿ ಜನಪ್ರತಿನಿಧಿಗಳು ಸಾರ್ವಜನಿಕರಿಗೆ ಅರ್ಪಿಸಿದರು.

ನಂತರ ಮಾತನಾಡಿದ ವಾರ್ಡ್ ಸದಸ್ಯ ಫಾರೂಕ್ ಕಿನ್ಯ  , ಊರವರ ಸಹಕಾರದಿಂದ ಇಂತಹ ರಸ್ತೆಯನ್ನು ಪಂಚಾಯತ್ ಅನುದಾನದಿಂದಲೇ ಮಾಡಲು ಸಾಧ್ಯವಾಯಿತು. ಒಗ್ಗಟ್ಟು ಇದ್ದರೆ ಯಾವ ಅಭಿವೃದ್ಧಿ ಕಾರ್ಯವನ್ನು ಕೂಡ ಮಾಡಬಹುದು ಎಂದು ಇಲ್ಲಿ ಸ್ಪಷ್ಟವಾಗಿದೆ ಎಂದು   ಹೇಳಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಾಲಿನಿ, ತಾಲೂಕು ಅಧ್ಯಕ್ಷ  ಮುಹಮ್ಮದ್ ಮೋನು, ಮಾಜಿ ಪಂಚಾಯತ್ ಅಧ್ಯಕ್ಷ ಹಮೀದ್ ಕಿನ್ಯಾ ,  ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಸಂತೋಷ್ ಶೆಟ್ಟಿ, ಎನ್.ಎಸ್.ಕರೀಂ, ಸಿದ್ದಿಕ್ ತಲಪಾಡಿ, ಅಬೂಸಾಲಿ ಹಾಜಿ ಕುರಿಯಕಾರ್, ಸಾದುಕುಂಞ ಮಾಸ್ಟರ್, ಶ್ರೀಮತಿ ಕುಸುಮ, ಆಶಾಲತ ಹಾಗೂ ಇತರ ಪಂಚಾಯತ್ ಸದಸ್ಯರು  ಉಪಸ್ಥಿತರಿದ್ದರು.

ಕಿನ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಿರಾಜುದ್ದೀನ್ ಕಿನ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News