ಕರ್ನಾಟಕ ವಿಶ್ವವಿದ್ಯಾಲಯ : ಬಿಸಿಎ ಯಲ್ಲಿ ಫಿರ್‌ದೋಸ್ ಫರಿಯಾಲ್ ಗೆ ರ‍್ಯಾಂಕ್
Update: 2017-01-20 18:23 IST
ಭಟ್ಕಳ , ಜ.20 : ಕರ್ನಾಟಕ ವಿಶ್ವವಿದ್ಯಾಲಯ 2016 ರಲ್ಲಿ ನಡೆಸಿದ ಬಿಸಿಎ ಪರೀಕ್ಷೆಯಲ್ಲಿ ಭಟ್ಕಳ ಶ್ರೀ ಗುರು ಸುಧೀಂದ್ರ ಬಿಸಿಎ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಫಿರ್‌ದೋಸ್ ಫರಿಯಾಲ್ ಶೇಕಡಾ 90.80 ಪಡೆದು ವಿಶ್ವವಿದ್ಯಾಲಯಕ್ಕೆ 2ನೇ ರ‍್ಯಾಂಕ್ ಪಡೆದಿರುತ್ತಾಳೆ.
ಈಕೆ ಉತ್ತರ ಕನ್ನಡ ಜಿಲ್ಲೆಯ ಬಿಸಿಎ ವಿಭಾಗದಲ್ಲಿ ರ‍್ಯಾಂಕ್ ಪಡೆದ ಏಕೈಕ ವಿದ್ಯಾರ್ಥಿನಿಯಾಗಿದ್ದಾಳೆ .
ಉತ್ತಮ ವಿದ್ಯಾರ್ಥಿನಿ ಪ್ರಶಸ್ತಿಗೂ ಭಾಜನರಾಗಿರುವ ಭಟ್ಕಳದ ಈ ಯುವಪ್ರತಿಭೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಚಾರ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿರುತ್ತಾರೆ.