ವೈ ಕೆಟಗರಿ ಭದ್ರತೆ ನನಗೆ ಬೇಡ: ಕುಮ್ಮನಂ ರಾಜಶೇಖರ್
Update: 2017-01-20 18:43 IST
ತಿರುವನಂತಪುರಂ,ಜ.20: ರಾಜ್ಯದ ಸಾಮಾನ್ಯ ಬಿಜೆಪಿ ಕಾರ್ಯಕರ್ತರಿಗೆ ಸುರಕ್ಷತೆಯಿಲ್ಲದ ಪರಿಸ್ಥಿತಿಯಲ್ಲಿ ತನಗೆ ವೈಕೆಟಗರಿ ಸುರಕ್ಷತೆಯ ಅಗತ್ಯವಿಲ್ಲ ಎಂದು ಕೇಂದ್ರಸರಕಾರಕ್ಕೆ ಹೇಳಿದ್ದೇನೆಂದು ಬಿಜೆಪಿ ಕೇರಳ ಅಧ್ಯಕ್ಷ ಕುಮ್ಮನಂ ರಾಜಶೇಖರ್ ತಿಳಿಸಿದ್ದಾರೆ.
ಕುಮ್ಮನಂ ಸಹಿತ ಮಾಜಿ ರಾಜ್ಯಾಧ್ಯಕ್ಷ ಪಿ.ಕೆ. ಕೃಷ್ಣದಾಸ್, ರಾಜ್ಯ ಪ್ರಧಾನಕಾರ್ಯದರ್ಶಿಗಳಾದ ಎಂಟಿ ರಮೇಶ್, ಕೆ. ಸುರೇಂದ್ರನ್‌ರಿಗೆ ಕೇಂದ್ರ ಸರಕಾರ ವೈಕೆಟಗರಿ ಸುರಕ್ಷತೆ ಏರ್ಪಡಿಸಲು ತೀರ್ಮಾನಿಸಿತ್ತು. ಭಯೋತ್ಪಾದಕ ಸಂಘಟನೆಗಳಿಂದ ಬೆದರಿಕೆ ಇದೆಎನ್ನುವ ಗುಪ್ತಚರ ಇಲಾಖೆ ವರದಿಯಹಿನ್ನೆಲೆಯಲ್ಲಿ ವೈಕೆಟಗರಿ ಭದ್ರತೆ ನೀಡಲು ಕೇಂದ್ರ ಸರಕಾರ ನಿರ್ಧರಿಸಿತ್ತು ಎಂದು ವರದಿ ತಿಳಿಸಿದೆ.