×
Ad

ಫೆ.7ಕ್ಕೆ ಬ್ಯಾಂಕ್ ಮುಷ್ಕರ

Update: 2017-01-20 18:46 IST

ಹೊಸದಿಲ್ಲಿ,ಜ.20: ಫೆಬ್ರವರಿ ಏಳಕ್ಕೆ ಬ್ಯಾಂಕ್ ನೌಕರರು ರಾಷ್ಟ್ರಮಟ್ಟದಲ್ಲಿ ಮುಷ್ಕರ ನಡೆಸಲಿದ್ದಾರೆ. ಬ್ಯಾಂಕ್ ನೌಕರರ ಜಂಟಿ ಸಂಘಟನೆ ಮುಷ್ಕರವನ್ನು ಘೋಷಿಸಿದೆ. ನೋಟು ನಿಷೇಧದಿಂದಾದ ಬಿಕ್ಕಟ್ಟು ಪರಿಹರಿಸಬೇಕು. ಪಾವತಿಯಾಗದ ಸಾಲ ಪಾವತಿಗೆ ಕ್ರಮ ಜರಗಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ನೌಕರರ ಸಂಘಟನೆ ಪ್ರತಿಭಟನೆಗಿಳಿಯಲಿದೆ.

ಕೇಂದ್ರ ಸರಕಾರ ನೋಟು ಅಮಾನ್ಯ ಜಾರಿಗೆ ತಂದು ಮೂರು ತಿಂಗಳು ಭರ್ತಿಯಾಗಲಿರುವ ಫೆಬ್ರವರಿ ಏಳನ್ನೇ ಬ್ಯಾಂಕ್‌ನೌಕರರು ತಮ್ಮ ಮುಷ್ಕರಕ್ಕೆ ಆಯ್ಕೆಮಾಡಿದ್ದಾರೆ ಎಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News