ವಾಶಿಂಗ್‌ಮೆಶಿನ್‌ಗೆ ಬಿದ್ದು ‘ವೈಟ್’ ಆದ ಹೊಸ 500 ರೂ ನೋಟು!
ಹೊಸದಿಲ್ಲಿ,ಜ.20: ಅನಿರೀಕ್ಷಿತವಾಗಿ ವಾಶಿಂಗ್‌ಮೆಶಿನ್‌ಗೆ ಬಿದ್ದಿದ್ದ ತನ್ನ ಐನೂರು ರೂಪಾಯಿ ನೋಟನ್ನು ತೆಗೆದು ನೋಡುವಾಗ ಎಲ್ಲ ಬಣ್ಣ ಕಳಚಿಕೊಂಡು ಪರಿಶುದ್ಧವಾಗಿ ಬಂದದ್ದನ್ನು ನೋಡಿ ವ್ಯಕ್ತಿಯೊಬ್ಬರು ಹೌಹಾರಿಹೋದ ಪ್ರಸಂಗ ನಡೆದಿದೆ.
ನೋಟು ಅಮಾನ್ಯದ ಬಳಿಕ ಮಾರುಕಟ್ಟೆಗೆ ಬಂದಿರುವ ಹೊಸ ನೋಟುಗಳ ಗುಣಮಟ್ಟ ಕಳಪೆಯಾಗಿದೆ ಎಂಬ ಆರೋಪ ಈಗ ನಿಜವಾಗಿದೆ.
ರವಿಹಂಡಾ ಎಂಬವರ ಹೊಸ ಐನೂರು ರೂಪಾಯಿ ನೋಟು ಬಟ್ಟೆ ಒಗೆಯುವ ಯಂತ್ರಕ್ಕೆ ಬಿದ್ದಿತ್ತು. ನಂತರ ಅದನ್ನು ತೆಗೆದು ನೋಡಿದಾಗ ನೋಟಿನಲ್ಲಿದ್ದ ಹೆಚ್ಚಿನ ಅಕ್ಷರ, ಸಂಪೂರ್ಣ ಬಣ್ಣ ತೊಳೆದು ಕದಡಿಹೋಗಿದೆ. ಅದೇವೇಳೆ ಯಂತ್ರಕ್ಕೆ ಬಿದ್ದಿದ್ದ ಹಳೆಯ ನೂರು ರೂಪಾಯಿ ಐವತ್ತು ರೂಪಾಯಿ ನೋಟುಗಳ ಬಣ್ಣ ಸ್ವಲ್ಪವೂ ಕದಡಿ ಹೋಗಿಲ್ಲ ಅಕ್ಷರವೂ ಮಾಸಿಲ್ಲ ಎಂದು ತನ್ನ ಅನುಭವವನ್ನು ರವಿಹಂಡಾ ಟ್ವಿಟರ್‌ನಲ್ಲಿಫೋಟೊ ಸಹಿತ ಶೇರ್ ಮಾಡಿ ಹೇಳಿಕೊಂಡಿದ್ದಾರೆ.
ಹೊಸ ಐನೂರರ ನೋಟು ಅವರ ಅಂಗಿಜೇಬಿನಲ್ಲಿ ಉಳಿದು ಕೊಂಡಿತ್ತು. ಅಂಗಿ ವಾಶಿಂಗ್ ಮೆಶಿನ್‌ನಲ್ಲಿ ತೊಳೆದು ತೆಗೆದಾಗ ಐನೂರರ ನೋಟಿನ ಬಣ್ಣ ಸಂಪೂರ್ಣ ಮಾಯವಾಗಿದೆ. ಇತರ ನೋಟುಗಳ ಬಣ್ಣ ಸ್ವಲ್ಪವೂ ಕದಡಿಲ್ಲ ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆಎಂದು ವರದಿಯಾಗಿದೆ