×
Ad

ಈಶ್ವರ ಮಂಗಳ ತೈಬಾ ಸೆಂಟರ್‌ನಲ್ಲಿ ಬೃಹತ್ ಸ್ವಲಾತ್ ಮಜ್ಲಿಸ್

Update: 2017-01-20 19:26 IST

ಪುತ್ತೂರು ,  ಜ.20 :   ಆಧುನಿಕತೆಯ ಭ್ರಮೆ ಮತ್ತು ಅನಾಚಾರಗಳ ದಾಸರಾಗಿ, ಆಧ್ಯಾತ್ಮವನ್ನು ಕಡೆಗಣಿಸದಿರಿ ಎಂದು ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿ ಕೋಯ ತಂಙಳ್ ಅಲ್ ಬುಖಾರಿ ಬಾಯಾರ್ ಉಪದೇಶಿಸಿದರು.

ಇವರು ಇತ್ತೀಚೆಗೆ ಈಶ್ವರ ಮಂಗಳ ತ್ವೈಬಾ ಸೆಂಟರ್ ಆಯೋಜಿಸಿದ ಬೃಹತ್ ಸ್ವಲಾತ್ ಮಜ್ಲಿಸ್ ನೇತೃತ್ವ ವಹಿಸಿ ಮಾತನಾಡುತ್ತಿದ್ದರು.

ಅಸರ್ ನಮಾಜಿನ ಬಳಿಕ ಅಸ್‌ಅದ್ ಸಖಾಫಿ ತಿರುವಟ್ಟೂರು ಇವರ ನೇತೃತ್ವದಲ್ಲಿ ತಾಜುಲ್ ಉಲಮಾ ಮೌಲಿದ್ ಮಜ್ಲಿಸ್ ಹಾಗೂ ಹಾಫಿಳ್ ಸಜ್ಜಾದ್ ಮತ್ತು ಸಂಗಡಿಗರಿಂದ ಮುಹ್ಯುದೀನ್ ಮಾಲೆ ಆಲಾಪನೆ ನಡೆಯಿತು. ಹಾಫಿಲ್ ಪದವಿ ಪಡೆದ ಮೂರು ವಿದ್ಯಾರ್ಥಿಗಳನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.

ಸಯ್ಯಿದ್ ಪೂಕುಂಞಿ ತಂಙಳ್ ಅಲ್ ಅಹ್ದಲ್ ಆದೂರು ಇವರ ದುಆದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಚೆಯರ್ ಮ್ಯಾನ್ ಮುಹಮ್ಮದ್ ಮದನಿ ಸ್ವಾಗತಿಸಿದರು.

ತ್ವೈಬಾ ಎಜುಕೇಶನ್ ಸೆಂಟರ್ ಅಧ್ಯಕ್ಷರಾದ ಹಂಝ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದರು.

ಕೇರಳ ರಾಜ್ಯ ಎಸ್ ವೈ ಎಸ್ ಉಪಾಧ್ಯಕ್ಷ ಪಳ್ಳಂಗೋಡ್ ಅಬ್ದುಲ್ ಖಾದರ್ ಮದನಿ ಉದ್ಘಾಟಿಸಿದರು.

ಅಶ್ರಫ್ ಜೌಹರಿ ಎಮ್ಮೆಮಾಡು ತಾಜುಲ್ ಉಲಮಾ ಮತ್ತು ನೂರುಲ್ ಉಲಮಾ ಅನುಸ್ಮರಣಾ ಭಾಷಣ ಮಾಡಿದರು. 

ವೇದಿಕೆಯಲ್ಲಿ ಅಸ್ಸಯ್ಯಿದ್ ಇಂಬಿಚ್ಚಿಕೋಯ ತಂಙಳ್ ಖಲೀಲ್ ಸ್ವಲಾಹ್, ಮುಸ್ತಫ ಹಿಮಮಿ ಸಖಾಫಿ, ಹಾಫಿಲ್ ಅಬ್ದುಸ್ಸಲಾಂ ಚೆನ್ನಾರ್, ಸ್ವಲಾಹುದ್ದೀನ್ ಸಖಾಫಿ, ಅಬ್ದುಲ್ ಲತೀಫ್ ಸಖಾಫಿ, ಅಬ್ದುಲ್ ಖಾದಿರ್ ಹಾಜಿ ಪಳ್ಳತ್ತೂರು, ಪಿ.ಎಂ. ಅಬ್ದುರ್ರಹ್ಮಾನ್ ಚೋಯ್ಸಾ, ಅಡ್ವಕೇಟ್ ಶಾಕಿರ್ ಹಾಜಿ, ಅಬ್ದುರ್ರಹ್ಮಾನ್ ಮೇನಾಲ, ಸಮದ್ ಹಾಜಿ ಸುಳ್ಯ, ಅಬ್ದುಲ್ ಖಾದಿರ್ ಹಾಜಿ ಅಂಚಿನಡ್ಕ, ಮುಹಮ್ಮದ್ ಕುಂಞಿ ಎಂ.ಎ., ಅಝೀರ್ ಮಿಸ್ಬಾಹಿ, ಅಬೂಬಕರ್ ಕಜೆ, ಇಝ್ಝುದ್ದೀನ್ ಮುಸ್ಲಿಯಾರ್, ಅಬ್ಬಾಸ್ ಹಾಜಿ ಸುಳ್ಯ, ಅಬ್ಬಾಸ್ ಮುಸ್ಲಿಯಾರ್, ಅಬೂಬಕರ್ ಜಾಲ್ಸೂರ್, ಅಡ್ವಕೇಟ್ ಮೂಸ ಹಾಗೂ ಎಸ್ಸೆಸ್ಸೆಫ್ , ಎಸ್ ವೈಎಸ್ ನಾಯಕರು, ಉಲಮಾ ಉಮರಾ ನೇತಾರರು ಉಪಸ್ಥಿತರಿದ್ದರು.

ಉಮರ್ ಸಅದಿ ಈಶ್ವರಮಂಗಳ ಧನ್ಯವಾದ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News