ಜಲ್ಲಿಕಟ್ಟು ಸುಗ್ರೀವಾಜ್ಞೆಗೆ ಕೇಂದ್ರ ಸರಕಾರ ಅಸ್ತು
Update: 2017-01-20 19:58 IST
ಹೊಸದಿಲ್ಲಿ, ಜ.20: ಜಲ್ಲಿಕಟ್ಟು ಕ್ರೀಡೆಗೆ ಸಂಬಂಧಿಸಿ ಕೇಂದ್ರ ಸರಕಾರ ತಮಿಳುನಾಡು ಜನರ ಒತ್ತಡಕ್ಕೆ ಮಣಿದಿದ್ದು, ತಮಿಳು ನಾಡು ಸರಕಾರ ರಾಜ್ಯಪಾಲರ ಮೂಲಕ ಕಳುಹಿಸಿದ ಸುಗ್ರೀವಾಜ್ಞೆಗೆ ಕೇಂದ್ರ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ.
ಸುಗ್ರೀವಾಜ್ಞೆಗೆ ಕೇಂದ್ರ ಕಾನೂನು ಇಲಾಖೆ ಒಪ್ಪಿಗೆ ನೀಡಿದೆ.ಕೇಂದ್ರ ಸರಕಾರಿ ಜಲ್ಲಿಕಟ್ಟು ಕ್ರೀಡೆಗೆ ಒಪ್ಪಿಗೆ ನೀಡಿದ ಸುದ್ದಿ ಗೊತ್ತಾಗುತ್ತಿದಂತೆ ಚೆನ್ನೈನ ಮರೀನಾ ಬೀಚ್ ನಲ್ಲಿ ಜಲ್ಲಿ ಕಟ್ಟು ನಿಷೇಧ ತೆರವಿಗೆ ಹೋರಾಟ ನಡೆಸುತ್ತಿದ್ದ ಚಳವಳಿಗಾರರಿಂದ ವಿಜಯೋತ್ಸವ ಆರಂಭಗೊಂಡಿದೆ.
ರಾಷ್ಟ್ರಪತಿ ಪ್ರಣವ್ ಮುಖರ್ಜಿ ಶನಿವಾರ ಸುಗ್ರೀವಾಜ್ಞೆಗೆ ಸಹಿ ಹಾಕುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.