×
Ad

ಟ್ರಂಪ್ ದೇಶದ ಕೆಟ್ಟ ಉದಾಹರಣೆ : ಹಿರಿಯ ನಟ ರಾಬರ್ಟ್ ಡಿ ನೀರೊ

Update: 2017-01-20 20:30 IST

ಲಾಸ್ ಏಂಜಲಿಸ್, ಜ. 20: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ದೇಶದ ಕೆಟ್ಟ ಉದಾಹರಣೆಯಾಗಿದ್ದಾರೆ’ ಎಂಬುದಾಗಿ ಹಿರಿಯ ನಟ ರಾಬರ್ಟ್ ಡಿ ನೀರೊ ಹೇಳಿದ್ದಾರೆ.

ಅವರು ನ್ಯೂಯಾರ್ಕ್ ಸಿಟಿಯಲ್ಲಿರುವ ಟ್ರಂಪ್ ಟವರ್‌ನ ಹೊರಗೆ ಗುರುವಾರ ಪ್ರತಿಭಟನಾ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಇದೇ ರ್ಯಾಲಿಯಲ್ಲಿ ನಟರಾದ ಅಲೆಕ್ ಬಾಲ್ಡ್‌ವಿನ್, ಮಾರ್ಕ್ ರಫೇಲೊ, ಮೈಕಲ್ ಮೂರ್ ಮತ್ತು ಗಾಯಕ ಚೆರ್ ಭಾಗವಹಿಸಿದ್ದರು.ಪ್ರತಿಭಟನಾ ಸಭೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.

ವಾಶಿಂಗ್ಟನ್, ಜ. 20: ಡೊನಾಲ್ಡ್ ಜಾನ್ ಟ್ರಂಪ್ ಅಮೆರಿಕದ 45ನೆ ಅಧ್ಯಕ್ಷರಾಗಿ ಶುಕ್ರವಾರ ಮಧ್ಯಾಹ್ನ (ಭಾರತೀಯ ಕಾಲಮಾನ ಶುಕ್ರವಾರ ಮಧ್ಯರಾತ್ರಿಯ ಬಳಿಕ) ಅಧಿಕಾರ ಸ್ವೀಕರಿಸಲಿದ್ದಾರೆ.

ವಾಶಿಂಗ್ಟನ್‌ನಲ್ಲಿರುವ ಅಮೆರಿಕದ ಸಂಸತ್ತು ಕಾಂಗ್ರೆಸ್‌ನ ಕಟ್ಟಡ ‘ಕ್ಯಾಪಿಟಾಲ್’ನಲ್ಲಿ ಅಧಿಕಾರದ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅಧ್ಯಕ್ಷ ಟ್ರಂಪ್ ಭೋಜನಕೂಟವೊಂದರಲ್ಲಿ ಭಾಗವಹಿಸಲಿದ್ದಾರೆ. ಪೆನ್ಸಿಲ್ವೇನಿಯ ಅವೆನ್ಯೂನಲ್ಲಿ ಆವರ ಆರಂಭಿಕ ಯಾತ್ರೆ ಅಪರಾಹ್ನ 3 ಗಂಟೆ ಹೊತ್ತಿಗೆ ನಡೆಯುತ್ತದೆ.

ಅದೇ ವೇಳೆ, ಟ್ರಂಪ್ ಆಡಳಿತವನ್ನು ಪ್ರತಿಭಟಿಸಿ ಸಾವಿರಾರು ಜನರು ಬೀದಿಗಿಳಿಯಲಿದ್ದಾರೆ.

ಪ್ರಮಾಣ ವಚನ ನಡೆಯುವ ಸ್ಥಳಕ್ಕೆ ಪ್ರವೇಶ ಕಲ್ಪಿಸುವ ಎಲ್ಲ 20 ದ್ವಾರಗಳಲ್ಲಿ ಪ್ರತಿಭಟನಕಾರರು ಜಮಾಯಿಸಲಿದ್ದಾರೆ.

ರಸ್ತೆ ಸಂಚಾರವನ್ನು ತಡೆಯುವ ಹಾಗೂ ಸಾರ್ವಜನಿಕ ಸಾರಿಗೆಗೆ ಅಡ್ಡಿಪಡಿಸುವ ಮೂಲಕ ನಗರವನ್ನು ಅಸ್ತವ್ಯಸ್ತಗೊಳಿಸುವುದಾಗಿಯೂ ಕೆಲವು ಗುಂಪುಗಳು ಹೇಳಿವೆ.

ಟ್ರಂಪ್ ಪ್ರಮಾಣವಚನ ಸ್ವೀಕರಿಸುವುದರೊಂದಿಗೆ, 2006ರ ಬಳಿಕ ಮೊದಲ ಬಾರಿಗೆ ರಿಪಬ್ಲಿಕನ್ನರಿಗೆ ಶ್ವೇತಭವನ ಮತ್ತು ಕಾಂಗ್ರೆಸ್- ಈ ಎರಡರ ನಿಯಂತ್ರಣವೂ ಸಿಗಲಿದೆ.

ಟ್ರಂಪ್ 40 ವರ್ಷಗಳ ಅವಧಿಯಲ್ಲಿ ಕನಿಷ್ಠ ಜನಪ್ರಿಯ ನೂತನ ಅಧ್ಯಕ್ಷರಾಗಿ ಶ್ವೇತಭವನ ಪ್ರವೇಶಿಸುತ್ತಿದ್ದಾರೆ ಎಂಬುದಾಗಿ ವಾಶಿಂಗ್ಟನ್ ಪೋಸ್ಟ್/ಎಬಿಸಿ ನ್ಯೂಸ್‌ನ ನೂತನ ಸಮೀಕ್ಷೆಯೊಂದು ತಿಳಿಸಿದೆ. 40 ಶೇಕಡದಷ್ಟು ಅಮೆರಿಕನ್ನರು ಟ್ರಂಪ್‌ಗೆ ಪರವಾಗಿದ್ದಾರೆ. ಇದು ಅಧಿಕಾರದಿಂದ ಕೆಳಗಿಳಿಯುತ್ತಿರುವ ಒಬಾಮರ ಪರವಾಗಿರುವವರ ಸಂಖ್ಯೆಗಿಂತ 21 ಶೇಕಡದಷ್ಟು ಕಡಿಮೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News