×
Ad

ನೀರ್ಗಲ್ಲು ದಾಳಿಗೊಳಗಾದ ಹೊಟೇಲ್‌ನಿಂದ 6 ಮಂದಿ ಜೀವಂತ ಪತ್ತೆ

Update: 2017-01-20 20:58 IST

ಪೆನ್ (ಇಟಲಿ), ಜ. 20: ಎರಡು ದಿನಗಳ ಹಿಂದೆ ನೀರ್ಗಲ್ಲು ದಾಳಿಗೆ ಸಿಲುಕಿ ಕೊಚ್ಚಿಹೋಗಿದ್ದ ಇಟಲಿಯ ಪರ್ವತವೊಂದರಲ್ಲಿದ್ದ ಹೊಟೇಲ್‌ನಿಂದ ಆರು ಮಂದಿಯನ್ನು ರಕ್ಷಣಾ ಕಾರ್ಯಕರ್ತರು ಶುಕ್ರವಾರ ಜೀವಂತವಾಗಿ ರಕ್ಷಿಸಿದ್ದಾರೆ. ಇದರೊಂದಿಗೆ, ಬದುಕುಳಿದವರ ಸಂಖ್ಯೆ ಇನ್ನೂ ಹೆಚ್ಚಬಹುದು ಎಂಬ ನಿರೀಕ್ಷೆ ಮೂಡಿದೆ.

ಬದುಕುಳಿದವರ ಪೈಕಿ ಐವರನ್ನು ಹೆಲಿಕಾಪ್ಟರ್‌ಗಳು ಪೆಸ್ಕರದಲ್ಲಿರುವ ಆಸ್ಪತ್ರೆಗೆ ದಾಖಲಿಸಿವೆ. ಬದುಕುಳಿದವರಲ್ಲಿ ಓರ್ವ ಬಾಲಕಿ ಮತ್ತು ಓರ್ವ ಮಹಿಳೆಯಿದ್ದಾರೆ.

ಹೊಟೇಲ್‌ನ ಹಿಮಾಚ್ಛಾದಿತ ಅವಶೇಷಗಳಡಿಯಲ್ಲಿ 40 ಗಂಟೆಗಳಿಗೂ ಅಧಿಕ ಕಾಲ ಸಿಲುಕಿಕೊಂಡಿದ್ದ ಅವರನ್ನು ಶುಕ್ರವಾರ ಮೇಲೆತ್ತಲಾಯಿತು.
ಮೂರು ಅಂತಸ್ತುಗಳ ಹೊಟೇಲ್‌ನ ಕೆಲವು ಕೋಣೆಗಳು ಭದ್ರವಾಗಿದ್ದು, ಅವುಗಳಲ್ಲಿ ಇದ್ದವರು ಬದುಕುಳಿದಿರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News