​ಅಮೆರಿಕದ 45ನೆ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ

Update: 2017-01-20 17:49 GMT

ವಾಷಿಂಗ್ಟನ್, ಜ.20: ಅಮೆರಿಕದ 45ನೆ  ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಇಂದು ಪ್ರಮಾಣವಚನ ಸ್ವೀಕರಿಸಿದರು. ವಾಷಿಂಗ್ಟನ್ ಕ್ಯಾಪಿಟಲ್ ಕಟ್ಟಡದ ಮುಂಭಾಗದಲ್ಲಿ ನಡೆದ  ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ  10 ಲಕ್ಷಕ್ಕೂ ಅಧಿಕ ಜನರು ಉಪಸ್ಥಿತರಿದ್ದರು. 

ಮೊದಲು ಅಮೆರಿಕದ  ಉಪಾಧ್ಯಕ್ಷರಾಗಿ ಮೈಕ್‌ ಪೆನ್ಸ್‌ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಟ್ರಂಪ್ ಬೈಬಲ್‌ ಹಿಡಿದು ಪ್ರಮಾಣ ವಚನ ಸ್ವೀಕರಿಸಿದರು. ಸುಪ್ರೀಂ ಕೋರ್ಟ್ ನ  ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ ಅವರು ಪ್ರಮಾಣ ವಚನ ಬೋಧಿಸಿದರು. 

ಸಮಾರಂಭದಲ್ಲಿ ನಿರ್ಗಮನ ಅಧ್ಯಕ್ಷ ಬರಾಕ್ ಒಬಾಮ, ಮಾಜಿ ಅಧ್ಯಕ್ಷ ಜಾರ್ಜ್ ಬುಶ್ , ಜಿಮ್ಮಿ ಕಾರ್ಟರ್ ದೇಶ ವಿದೇಶಗಳ ಗಣ್ಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News