×
Ad

ಮುಷ್ಕರದಲ್ಲಿ ಭಾಗಿಯಾಗಿದ್ದ ಜೆಎನ್‌ಯು ಶಿಕ್ಷಕರ ವೇತನದಲ್ಲಿ ಕಡಿತ

Update: 2017-01-20 23:01 IST

ಹೊಸದಿಲ್ಲಿ,ಜ.20: ಜ.17ರಂದು ಒಂದು ದಿನದ ಮುಷ್ಕರದಲ್ಲಿ ಭಾಗಿಯಾಗಿದ್ದ ಜೆಎನ್‌ಯು ಶಿಕ್ಷಕರು ಅಂದಿನ ವೇತನವನ್ನು ಕಳೆದುಕೊಳ್ಳಲಿದ್ದಾರೆ ಎಂದು ವಿವಿ ಅಧಿಕಾರಿಗಳು ತಿಳಿಸಿದ್ದಾರೆ. ವಿವಿ ಆಡಳಿತ ಮಂಡಳಿಯ ನಿರ್ಧಾರಗಳನ್ನು ವಿರೋಧಿಸಿ ವಿದ್ಯಾರ್ಥಿಗಳು ನಡೆಸಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ್ದಕ್ಕೆ ಬೋಧಕರಿಗೆ ಹಲವಾರು ನೋಟಿಸುಗಳನ್ನು ಕಳುಹಿಸಿದ್ದನ್ನು ವಿರೋಧಿಸಿ ಜೆಎನ್‌ಯು ಶಿಕ್ಷಕರ ಸಂಘವು ಜ.17ರಂದು ಮುಷ್ಕರವನ್ನು ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News