×
Ad

ಜ.29ರ ಮನ್ ಕಿ ಬಾತ್‌ನಲ್ಲಿ ಪರೀಕ್ಷೆ ಮುಖ್ಯ ವಿಷಯ

Update: 2017-01-20 23:06 IST

ಹೊಸದಿಲ್ಲಿ,ಜ.20: ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೊ ಭಾಷಣದ ಜ.29ರ ಕಂತು ವಿವಿಧ ಮಂಡಳಿಗಳ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಮೇಲೆ ಗಮನವನ್ನು ಕೇಂದ್ರೀಕರಿಸಲಿದೆ. ಇಂದು ಈ ವಿಷಯವನ್ನು ತಿಳಿಸಿದ ಮೋದಿ ತಮ್ಮ ಚಿಂತನೆಗಳು ಮತ್ತು ಅನುಭವಗಳನ್ನು ತನ್ನೊಂದಿಗೆ ಹಂಚಿಕೊಳ್ಳುವಂತೆ ವಿದ್ಯಾರ್ಥಿಗಳು.ಪೋಷಕರು ಮತ್ತು ಶಿಕ್ಷಕರನ್ನು ಆಹ್ವಾನಿಸಿ ಟ್ವೀಟಿಸಿದ್ದಾರೆ. ಜನರು ಪ್ರಧಾನಿಗಳಿಗೆ ತಮ್ಮ ಸಂದೇಶಗಳನ್ನು ಹಿಂದಿ ಅಥವಾ ಹಿಂದಿಯಲ್ಲಿ ಧ್ವನಿ ಮುದ್ರಿಸುವಂತೆಯೂ ತಿಳಿಸಿರುವ ಪ್ರಧಾನಿ ಕಚೇರಿಯು, ಕೆಲವು ಧ್ವನಿಮುದ್ರಿತ ಸಂದೇಶಗಳು ಮೋದಿಯವರ ಭಾಷಣದಲ್ಲಿ ಸೇರಬಹುದು ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News