ಎನ್ನೆಂಸಿಯಲ್ಲಿ ಯುಜಿಸಿ ಪ್ರಾಯೋಜಿತ ರಾಷ್ಟ್ರ ಮಟ್ಟದ ಕಾರ್ಯಾಗಾರ
ಸುಳ್ಯ , ಜ.20 : ನ್ಯಾಕ್ ಮಾನ್ಯತೆಗಾಗಿ ರಾಷ್ಟ್ರ ಮಟ್ಟದಲ್ಲಿ ಸ್ಥಳೀಯ ಮಾನದಂಡಗಳ ಅಭಿವೃದ್ಧಿ ಮತ್ತು ಶೈಕ್ಷಣಿಕ ನೈಪುಣ್ಯತೆ ವಿಚಾರವಾಗಿ ಯುಜಿಸಿ ಪ್ರಾಯೋಜಿತ ರಾಷ್ಟ್ರೀಯ ವಿಚಾರ ಸಂಕಿರಣ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ನಡೆಯಿತು.
ಉನ್ನತ ಶಿಕ್ಷಣ ಸಲಹೆಗಾರ ಡಾ.ಎಂ.ಅಬ್ದುಲ್ ರಹಿಮಾನ್ ಕಾರ್ಯಾಗಾರ ಉದ್ಘಾಟಿಸಿದರು.
2013ರಲ್ಲಿ ನ್ಯಾಕ್ ಮಾನ್ಯತೆಗೆ ಮಾನದಂಡಗಳನ್ನು ಪರಿಷ್ಕರಿಸಲಾಗಿದ್ದು, ಶಿಕ್ಷಕರಲ್ಲಿರುವ ಶೈಕ್ಷಣಿಕ ನೌಪುಣ್ಯತೆಯೊಂದಿಗೆ ಪರಿಸರ ರಕ್ಷಣೆ ಕುರಿತು ನಡೆಯುವ ಚಟುವಟಿಕೆಗೆ ಆಧ್ಯತೆ ನೀಡಲಾಗಿದೆ. ಕಾಲೇಜಿನ ಪರಿಸರದಲ್ಲಿನ ಶುಚಿತ್ವ, ಶಿಕ್ಷಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ಕೈಗೊಂಡಿರುವ ಕ್ರಮಗಳಿಗೆ ಹೆಚ್ಚಿನ ಅಂಕಗಳನ್ನು ನೀಡಲಾಗುತ್ತಿದೆ ಎಂದವರು ಹೇಳಿದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನಿನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕರು ನಡೆಸುವ ಸಂಶೋಧನೆಗಳಿಗೂ ನ್ಯಾಕ್ ಹೆಚ್ಚಿನ ಗಮನ ನೀಡಿದ್ದು, ಕಾಲೇಜು ಆಡಳಿತ ಮಂಡಳಿಗೂ ಅದಕ್ಕೆ ಪ್ರೋತ್ಸಾಹ ನೀಡುತ್ತಿವೆ. ಹಾಗಿದ್ದೂ ಅನುದಾನಿತ ಕಾಲೇಜುಗಳಲ್ಲಿ ನಿವೃತ್ತಿಯಾಗಿ ತೆರವಾಗುವ ಪ್ರಾಧ್ಯಾಪಕರ ಸ್ಥಾನಕ್ಕೆ ಹೊಸದಾಗಿ ಭರ್ತಿ ಮಾಡಲು ಅವಕಾಶವಿಲ್ಲದೆ ಸ್ಥಳೀಯ ಮಟ್ಟದಲ್ಲಿ ಆಡಳಿತ ಮಂಡಳಿ ತಾತ್ಕಾಲಿಕ ನೇಮಕ ಮಾಡಬೇಕಿದೆ. ಆದರೆ ಇಂತಹ ಸಂಧರ್ಭ ವೇತನದಲ್ಲಿ ಸಾಕಷ್ಟು ತಾರತಮ್ಯಗಳು ಇರುವುದರಿಂದ ತಾತ್ಕಾಲಿಕ ಶಿಕ್ಷಕರು ಹೆಚ್ಚು ಆಸಕ್ತಿಯಿಂದ ಭೋದನೆ ಮಾಡುತ್ತಿಲ್ಲ. ಶಿಕ್ಷಕರಲ್ಲಿ ಏಕರೂಪತೆ ಇದ್ದರೆ ಮಾತ್ರ ಎಲ್ಲರೂ ಹೆಚ್ಚು ಆಸಕ್ತಿಯಿಂದ ಕೆಲಸ ಮಾಡಲು ಸಾಧ್ಯ. ನ್ಯಾಕ್ ಈ ಕುರಿತು ಗಮನ ನೀಡುವ ಅಗತ್ಯವಿದೆ ಎಂದವರು ಹೇಳಿದರು.
ಮಂಗಳೂರು ವಿವಿಯ ಕಾಮರ್ಸ್ ಟೀಚರ್ಸ್ ಎಸೋಸಿಯೇಶನ್‌ನ ಅಧ್ಯಕ್ಷೆ ಡಾ.ಆಶಾಲತಾ ಸುವರ್ಣ, ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಜಗದೀಶ್ ಆಡ್ತಲೆ, ಕಾಲೇಜಿನ ಪ್ರಾಂಶುಪಾಲ ಡಾ.ಗಿರಿಧರ ಗೌಡ, ಪ್ರಾಧ್ಯಾಪಕ ಶಾಕಿರಾ ಜಾಬಿನ್, ಡಾ.ಪೂವಪ್ಪ ಕಣಿಯೂರು, ಕಾರ್ಯಕ್ರಮ ಸಂಘಟಕ ವಿ.ಶ್ರೀಧರ್, ಕ್ಯಾಂಪಸ್ಸಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಜವರೇಗೌಡ ವೇದಿಕೆಯಲ್ಲಿದ್ದರು. ದೀಕ್ಷಿತ್ ಕುಮಾರ್ ಹಾಗೂ ಪಿ.ಎಂ.ಭವ್ಯಾ ಕಾರ್ಯಕ್ರಮ ನಿರೂಪಿಸಿದರು.