ಜ.28, 29: ಸುಳ್ಯದಲ್ಲಿ ರಾಜ್ಯಮಟ್ಟದ ಕರಾಟೆ

Update: 2017-01-20 18:51 GMT

ಸುಳ್ಯ, ಜ.20: ಕಡಹಯ್ ಮಾರ್ಷಲ್ ಅಕಾಡಮಿ ಮತ್ತು ದ.ಕ. ಆರ್ಟ್ಸ್ ಮತ್ತು ಸ್ಪೋಟ್ಸ್ ಕರಾಟೆ ಅಸೋಸಿಯೇಶನ್ ಆಶ್ರಯದಲ್ಲಿ ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್ ಜ.28 ಹಾಗೂ 29ರಂದು ಸುಳ್ಯದ ಸೈಂಟ್ ಜೋಸೆಪ್ ಶಾಲೆಯಲ್ಲಿ ನಡೆಯಲಿದೆ ಎಂದು ಸಂಯೋಜಕ ಚಂದ್ರಶೇಖರ ಕನಕಮಜಲು ಸುದ್ದಿಗೋಷ್ಠಿಯಲ್ಲಿಂದು ಹೇಳಿದರು.

ಕಡಹಯ್ ಮಾರ್ಷಲ್ ಆರ್ಟ್ಸ್‌ನ ಟೆಕ್ನಿಕಲ್ ಡೈರೆಕ್ಟರ್ ರೋನ್ಶಿ ಜೈದೀಪ್ ಬಾಲೆ ರಾವ್ ಹಾಗೂ ಮುಖ್ಯ ತರಬೇತುದಾರ ಸೆನ್ಸಿ ಜೆ.ಡಿ.ಥೋಮಸ್ ನೇತೃತ್ವ ವಹಿಸಲಿದ್ದಾರೆ. ವೈಟ್ ಮತ್ತು ಎಲ್ಲೋ ಬೆಲ್ಟ್, ಆರೆಂಜ್ ಮತ್ತು ಗ್ರೀನ್ ಬೆಲ್ಟ್, ಬ್ಲೂ ಮತ್ತು ಪರ್ಪಲ್ ಬೆಲ್ಟ್, ಬ್ರೆನ್ ಬೆಲ್ಟ್ ಹಾಗೂ ಬ್ಲಾಕ್ ಬೆಲ್ಟ್ ವಿಭಾಗಗಳಲ್ಲಿ ವಿವಿಧ ವಯೋಮಾನಗಳ ವೈಯಕ್ತಿಕ ಸ್ಪರ್ಧೆ ಮತ್ತು ಟೀಮ್ ಕಟಾ ವಿಭಾಗದಲ್ಲಿ ತಂಡ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದವರು ವಿವರಿಸಿದರು.

ಅಸೋಸಿಯೇಶನ್‌ನ ಉಪಾಧ್ಯಕ್ಷ ನಾರಾಯಣ ಆಚಾರ್ಯ ಮಳಿ, ದಿನೇಶ್ ಮುರುಳ್ಯ, ಜೊತೆ ಕಾರ್ಯದರ್ಶಿ ತಾರನಾಥ ಹೊಸೋಳಿಕೆ, ಶಿಕ್ಷಕ ಸೋಮನಾಥ ಕೇರ್ಪಳ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News